

ಲಕ್ಷೇಶ್ವರ: ತಾಲೂಕಿನ ಸುಕ್ಷೇತ್ರ ಮಾಡಳ್ಳಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಢರ ಶಿವನಾಮ ಸಪ್ತಾಹ ಹಾಗೂ ಜಾತ್ರಾ ಮಹೋತ್ಸವ ಏ. 26ರಿಂದ 28ರವರೆಗೆ ಏರ್ಪಾಟಾಗಿದ್ದು, ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹಾಗೂ ವರವಿ ಮೌನೇಶ್ವರ ಮಠದ ಮೌನೇಶ್ವರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
26ರಂದು ಬೆಳಗ್ಗೆ 5ರಿಂದ10ರವರೆಗೆ ಶ್ರವಣ, ಬ್ರಹ್ಮ ಜಿಜ್ಞಾಸ ಮತ್ತು ಮಧ್ಯಾಹ್ನ 12ರಿಂದ 2ರವರೆಗೆ ಅನ್ನ ಸಂತರ್ಪಣೆ ಹಾಗೂ ಸಂಜೆ 6ರಿಂದ 10ರ ವರೆಗೆ ಉಪನ್ಯಾಸ,ಕೀರ್ತನೆ ನಂತರ ಶ್ರೀಗಳವರ ಮಹಾಪೂಜೆ ನಡೆಯುವುದು. 27ರಂದು ಪಾಲಕಿ ಉತ್ಸವ ಹಾಗೂ ಮಹಾಪ್ರಸಾದ, ಸಂಜೆ 5-30ಕ್ಕೆ ಶ್ರೀ ಸಿದ್ಧಾರೂಢರ ಮಹಾರಥೋತ್ಸವ ಜರುಗುವುದು.
ಪಶುಪತಿಹಾಳ ಗ್ರಾಮದ ಹೆಣ್ಣು ಮಕ್ಕಳಿಂದ ಡೊಳ್ಳಿನ ಮಜಲು ಪ್ರದರ್ಶನಗೊಳ್ಳುವುದು. 28ರಂದು ಕಡುಬಿನ ಕಾಳಗ ಹಾಗೂ ಕೌದಿ ಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುವುದು. ಸೂರಶೆಟ್ಟಿಕೊಪ್ಪ ಸಿದಾಟಛಿರೂಢ ಮಠದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮೀಜಿಗಳು ಕೀರ್ತನಾ ಸೇವೆ, ಗುರುನಾಥ ಶಾಸ್ತ್ರಿಗಳ ಪ್ರವಚನ ಹಾಗೂ ಅಣ್ಣಿಗೇರಿ ರಾಮಣ್ಣ ಮಾಸ್ತರ ಸಂಗೀತ ಸೇವೆ ಸಲ್ಲಿಸುವರು ಎಂದು ಪ್ರಕಟಣೆ ತಿಳಿಸಿದೆ.