ಮದಕರಿನಾಯಕ ಜಯಂತ್ಯುತ್ಸವ

CTD 12 Madakari 1
Published on

ಚಿತ್ರದುರ್ಗ: ಕೋಟೆನಗರಿಯಲ್ಲಿ ರಾಜವೀರ ಮದಕರಿನಾಯಕ ಜಯಂತ್ಯುತ್ಸವವನ್ನು ಅ. 13ರ ಮಧ್ಯಾಹ್ನ 3ರ ನಂತರ ಆಚರಿಸಲಾಗುತ್ತಿದ್ದು, ಈ ಸಂಬಂಧ ವಿದ್ಯುತ್ ಮತ್ತು ಪುಷ್ಪಾಲಂಕಾರ ಸೇರಿ ಇತರ ಸಿದ್ಧತೆಗಳನ್ನು ನಾಯಕ ಸಮುದಾಯದ ಮುಖಂಡರು ಗುರುವಾರ ಪರಿಶೀಲಿಸಿದರು.

ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದ ಮಾರ್ಗದುದ್ದಕ್ಕೂ ಮದಕರಿನಾಯಕ ಆಳ್ವಿಕೆಯ ರಾಜ ಲಾಂಛನದ ಬಾವುಟಗಳು ರಾರಾಜಿಸುತ್ತಿವೆ. ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಕನಕದಾಸ ಪ್ರತಿಮೆಗಳಿಗೆ ವಿಶೇಷಾಲಂಕಾರ ಮಾಡಲಾಗಿದೆ.

ನಗರದ ಮುಖ್ಯರಸ್ತೆಗಳು ವಿದ್ಯುದ್ದೀಪಾಲಂಕಾರದಿಂದ ಗಮನ ಸೆಳೆಯುತ್ತಿವೆ. ಗಾಂಧಿ ವೃತ್ತಕ್ಕೆ ಮದಕರಿನಾಯಕ ಭಾವಚಿತ್ರ ಅಳವಡಿಸಲಾಗಿದೆ.

ಪಾಳೆಗಾರರ ಕುಲದೇವತೆ ಉಚ್ಚಂಗಿಯಲ್ಲಮ್ಮ ದೇವಿಯ ಮೂರ್ತಿ, ಮದಕರಿ ನಾಯಕರ ಮನೆದೇವರಾದ ನೀರ್ತಡಿ ರಂಗನಾಥ ಸ್ವಾಮಿಗೂ ವಿಶೇಷ ಪೂಜೆ ನೆರವೇರಲಿದೆ. ನಂತರ ಮಧ್ಯಾಹ್ನ 12ಕ್ಕೆ ಪುತ್ಥಳಿಗೆ ಮಾಲಾರ್ಪಣೆ ಹಮ್ಮಿಕೊಳ್ಳಲಾಗಿದೆ.

ಉತ್ಸವದ ಯಶಸ್ಸು: ಮದಕರಿನಾಯಕರ ಜಯಂತ್ಯುತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನಾಯಕ ಸಮಾಜದವರು ಪಾಲ್ಗೊಳ್ಳುತ್ತಿದ್ದಾರೆ. ಉತ್ಸವದ ಯಶಸ್ಸಿಗೆ ಎಲ್ಲಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಿ.-ಬಿ.ಕಾಂತರಾಜ್, ತಾಲೂಕಾಧ್ಯಕ್ಷ , ನಾಯಕ ಸಮಾಜ

ವಿಜಯೋತ್ಸವದ ಚಿತ್ರ ವೈರಲ್: ಜಯಂತ್ಯುತ್ಸವ ಅಂಗವಾಗಿ ಹವ್ಯಾಸಿ ಚಿತ್ರ ಕಲಾವಿದ ಮಹಂತೇಶ್ ತ್ರಿವಿಕ್ರಮ ಮದಕರಿನಾಯಕ ಯುದ್ಧದಲ್ಲಿ ವಿಜಯೋತ್ಸವ ಸಾಧಿಸಿದ ಮಾದರಿಯ ಚಿತ್ರ ಬಿಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net