ಹೂಗಾರ ಮಾದಯ್ಯನವರ ಜಯಂತಿ 20ರಂದು

IMG20241019131900.jpg
Published on

ಬೆಳಗಾವಿ: ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಅ.20ರಂದು ಆಯೋಜಿಸಿದ್ದೇವೆ ಎಂದು ಬೆಳಗಾವಿ ಜಿಲ್ಲಾ ಹೂಗಾರ, ಗುರವ, ಜೀರ ಮತ್ತು ಪೂಜಾರ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಭು ಹೂಗಾರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಬಳಿಕ ಮೆರವಣಿಗೆ ನಡೆಯಲಿದೆ. ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ, ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಆಗಮಿಸುವರು ಎಂದು ತಿಳಿಸಿದರು.

ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮುದಾಯವನ್ನು ಸರ್ಕಾರ ನಿರ್ಲಕ್ಷ ಮಾಡಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಈಗಾಗಲೆ ತಾಲೂಕು, ಜಿಲ್ಲಾಮಟ್ಟದ ಕಮಿಟಿಗಳನ್ನು ಮಾಡಿದ್ದು, ಸರ್ಕಾರದ ಸೌಲಭ್ಯಗಳಿಗಾಗಿ ಹೋರಾಟ ಮಾಡುತ್ತೇವೆ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಶಿವಾನಂದ ಹೂಗಾರ, ಮೋಹನ್ ಹೂಗಾರ, ಬಿ.ಎಂ. ಹೂಗಾರ, ಮಹಾದೇವ ಹೂಗಾರ, ಎಲ್.ಕೆ. ಗುರುವ, ಭರತ ಹೂಗಾರ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net