

ಗಜೇಂದ್ರಗಡ: ಬಸವಣ್ಣನವರ ಸಮಕಾಲೀನದಲ್ಲಿ ಜನ್ಮ ತಾಳಿದ ಶರಣ ಹೂಗಾರ ಮಾದಯ್ಯನವರ ಬದುಕು, ಜೀವನ, ಕಾರ್ಯಕ್ಷಮತೆ ಸಮಾಜಕ್ಕೆ ಸಂದೇಶವಾಗಿದೆ ಎಂದು ಪುರಸಭೆ ನಾಮನಿರ್ದೇಶಿತ ಸದಸ್ಯ ಬಸವರಾಜ ಹೂಗಾರ ಹೇಳಿದರು.
ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಬುಧವಾರ ತಾಲೂಕು ಹೂಗಾರ ಸಮಾಜದ ವತಿಯಿಂದ ಆಯೋಜಿಸಿದ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಸತ್ಯ ಪರಂಪರೆ ಹೊಂದಿದ ನಾಡಾಗಿದೆ. ಈ ದೇಶದಲ್ಲಿ ಅನೇಕ ಮಹಾ ಶರಣರು ಹುಟ್ಟಿ ಸಮಾಜಗಳಿಗೆ ಪ್ರೇರಣೆ ಕೊಟ್ಟು ಹೋಗಿದ್ದಾರೆ. ಬಸವಣ್ಣನವರ ಸಮಕಾಲೀನದಲ್ಲಿ ಜನ್ಮ ತಾಳಿದ ಶರಣ ಮಾದಯ್ಯನವರು ಕಾಯಕದ ಮೂಲಕ ಸಮಾಜಕ್ಕೆ ಶಕ್ತಿ ತುಂಬಿದವರಾಗಿದ್ದಾರೆ ಎಂದರು.
ತಾ.ಪಂ. ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ, ಪುರಸಭೆ ಸದಸ್ಯ ಮುರ್ತಜಾ ಡಾಲಾಯತ, ಮಲ್ಲಯ್ಯಸ್ವಾಮಿ ಗುರುಸ್ಥಳಮಠ, ರವಿ ಗಡೇದವರ, ಬಸವರಾಜ ಹೂಗಾರ, ಲೋಕಪ್ಪ ರಾಠೋಡ, ಚಿದಾನಂದಪ್ಪ ಹಡಪದ, ರಾಜೇಂದ್ರ ಹಿರೇಮಠ, ಕಳಕಯ್ಯ ಸಾಲಿಮಠ, ದೇವಪ್ಪ ಮಡಿವಾಳರ, ಶ್ರೀಕಾಂತ ತಾಳಿಕೋಟಿ, ಶರಣು ಪೂಜಾರ ಇದ್ದರು.