

ಮಡಿಕೇರಿ:
ನಾಪೋಕ್ಲುವಿನ ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾ ಅತ್ ಆಶ್ರಯದಲ್ಲಿ ಶುಕ್ರವಾರದಿಂದ (ಸೆ. 20) ಮೂರು ದಿನ ನಾಪೋಕ್ಲುವಿನಲ್ಲಿ ಬೃಹತ್ ಮಿಲಾದ್ ಸಮಾವೇಶ 'ಮದದೇ ಮದೀನಾ' ಆಯೋಜಿಸಲಾಗಿದೆ ಎಂದು ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾ ಅತ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ.
ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ಸೆ. 20, 21 ಹಾಗೂ 22ರಂದು ನಡೆಯುವ ಕಾರ್ಯಕ್ರಮದಲ್ಲಿ 20 ಜಮಾ ಅತ್‌ಗಳು ಪಾಲ್ಗೊಳ್ಳಲಿವೆ. ಮೊದಲ ದಿನ ಸಂಜೆ 7 ಗಂಟೆಗೆ ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾ ಅತ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹ್ಮಾನ್ ನೇತೃತ್ವದಲ್ಲಿ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾ ಅತ್‌ನ ಮುರ‍್ರಿಸ್ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮಿಲಾದ್ ಸ್ವಾಗತ ಸಮಿತಿ ಗೌರವಾಧ್ಯಕ್ಷ ಉಸ್ಮಾನ್ ಹಾಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾ ಅತ್‌ನ ಖತೀಬ್ ಉಬೈದ್ ಸಖಾಫಿ ಅಲ್ ಅಝ್‌ಹರಿ ವಯನಾಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮುದರಿಸ್ ಕುಂಜಿಲ ನಿಝಾರ್ ಅಹ್ಸನಿ ಕಕ್ಕಿಡಿಪುರಂ ದುಆ ನೇತೃತ್ವ ವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೆ.21ರಂದು ಬೆಳಗ್ಗೆ ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾ ಅತ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹ್ಮಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮದ್ರಸ ವಿದ್ಯಾರ್ಥಿಗಳ ಕಲಾ ಸ್ಪರ್ಧೆಯನ್ನು ನಾಪೋಕ್ಲು ಮುಅಲ್ಲಿಂ ಹಿದಾಯತುಲ್ ಇಸ್ಲಾಂ ಮದ್ರಸದ ರಫೀಖ್ ಅಹ್ಸನಿ ಉದ್ಘಾಟಿಸುವರು. ಸಂಜೆ 7 ಗಂಟೆಗೆ ಹುಬ್ಬುರಸೂಲ್ ಪ್ರಭಾಷಣ ಏರ್ಪಡಿಸಲಾಗಿದೆ. ನಾಪೋಕ್ಲು ಟೌನ್ ಸುನ್ನಿ ಮುಸ್ಲಿಂ ಜಮಾ ಅತ್ ಮಾಜಿ ಖತೀಬ್ ಶಾದುಲಿ ಸಖಾಪಿ ಕಾರ್ಯಕ್ರಮ ಉದ್ಘಾಟಿಸುವರು. ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಅಬೂಬಕರ್ ಎಂ.ಎA. ಅಧ್ಯಕ್ಷತೆ ವಹಿಸಲಿದ್ದಾರೆ. ಯಹ್ಯ ಬಾಖವಬಿ ಪುಝಕ್ಕರ ಮುಖ್ಯ ಪ್ರಭಾಷಣ ಮಾಡಲಿದ್ದು, ಸಯ್ಯಿದ್ ಅಬ್ದುಲ್ ಅಝೀಝ್ ತಂಙಳ್ ಮಲೇಶಿಯಾ ದುಆ ನೇತೃತ್ವ ವಹಿಸಲಿದ್ದಾರೆ.
ಸೆ.22ರಂದು ಮಧ್ಯಾಹ್ನ 1.30ಕ್ಕೆ ಹಳೇ ತಾಲೂಕು ಮಸೀದಿ ಆವರಣದಿಂದ ನಾಪೋಕ್ಲು ಮಾರುಕಟ್ಟೆ ತನಕ ಬೃಹತ್ ಮಿಲಾದ್ ಸಂದೇಶ ಜಾಥಾ ಏರ್ಪಡಿಸಲಾಗಿದೆ. 2-3 ಸಾವಿರ ಜನ ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಪ್ರವಾದಿ ಮಹಮ್ಮದರ ಶ್ಲೋಕಗಳ ಮೂಲಕ ಶಾಂತಿ ಸೌಹಾರ್ದತೆಯ ಸಂದೇಶ ನೀಡುವ ಸಲುವಾಗಿ ಈ ಜಾಥಾ ನಡೆಸಲಾಗುತ್ತಿದೆ. ಸಂಜೆ 4 ಗಂಟೆಗೆ ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾ ಅತ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹ್ಮಾನ್ ಎಂ.ಹೆಚ್. ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮಾವೇಶ ಏರ್ಪಡಿಸಲಾಗಿದೆ. ಕೊಡಗು ಜಿಲ್ಲೆ ನಾಇಬ್ ಖಾಝಿ ಅಬ್ದುಲ್ಲ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನನ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ವಿಶೇಷ ಅಥಿಗಳಾಗಿ ಭಾಗವಹಿಸುವರು.
ಸಂಜೆ 7 ಗಂಟೆಗೆ ಅಬ್ದುಲ್ ಲತೀಫ್ ಸಖಾಫಿ ಕಾಂತಪುರA ನೇತೃತ್ವದಲ್ಲಿ ಮದನೀಯಂ ಆತ್ಮೀಯ ಮಜ್ಲಿಸ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಸಯ್ಯಿದ್ ಅಲ್ ಮಶ್‌ಹೂರ್ ಆಟಕೋಯ ತಂಙಳ್ ಅಲ್ ಅಝ್‌ಹರಿ ನಿಲಾಮುಟಂ ನೇತೃತ್ವದಲ್ಲಿ ದುಆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾ ಅತ್ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಜ್, ಸಲೀಂ ಹ್ಯಾರಿಸ್, ಹಮೀದ್ ಬಿ.ಹೆಚ್., ಮಿಲಾದ್ ಸಮಿತಿ ಗೌರವಾಧ್ಯಕ್ಷ ಉಸ್ಮಾನ್ ಕೆ.ಕೆ. ಹಾಗೂ ಕಾರ್ಯದರ್ಶಿ ಅಹಮ್ಮದ್ ಸಿ.ಹೆಚ್. ಸುದ್ದಿಗೋಷ್ಠಿಯಲ್ಲಿ ಇದ್ದರು.