ಮಾಡ ಕ್ಷೇತ್ರ ಬಂಡಿ ಉತ್ಸವಕ್ಕೆ ಚಾಲನೆ

bandi utsava
ಉದ್ಯಾವರ ಶ್ರೀ ಅರಸು ಮಾಡ ಕ್ಷೇತ್ರದ ಐತಿಹಾಸಿಕ ಬಂಡಿ ಉತ್ಸವಕ್ಕೆ ಧ್ವಜಾರೋಹಣದೊಂದಿಗೆ ಉಜ್ವಲದ ಚಾಲನೆ ದೊರಕಿತು.
Published on

ಮಂಜೇಶ್ವರ: ಉದ್ಯಾವರ ಶ್ರೀ ಅರಸು ಮಾಡ ಕ್ಷೇತ್ರದ ಐತಿಹಾಸಿಕ ಬಂಡಿ ಉತ್ಸವಕ್ಕೆ ಧ್ವಜಾರೋಹಣದೊಂದಿಗೆ ಉಜ್ವಲದ ಚಾಲನೆ ದೊರಕಿತು.

ಬಳಿಕ ಶ್ರೀ ಅರಸು ಮಂಜಿಷ್ಣಾರ್ ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆ ಸದಸ್ಯರಿಂದ ತಾಲೀಮು ಪ್ರದರ್ಶನ ನಡೆಯಿತು. ಗುರುವಾರ ರಾತ್ರಿ ಯಕ್ಷಗಾನ ಹಾಗೂ ಸಂಗೀತ ರಸಮಂಜರಿ ನಡೆಯಿತು. ಶುಕ್ರವಾರ ಹಾಗೂ ಶನಿವಾರಗಳಲ್ಲಿ ಅಣ್ಣ ತಮ್ಮ ದೈವಗಳ ನೇಮ ಬಳಿಕ ಬಂಡಿ ಉತ್ಸವ, ಬಳಿಕ ಸುಡುಮದ್ದು ಪ್ರದರ್ಶನ ನಡೆಯಲಿದೆ. ಮೇ.14ಕ್ಕೆ ಧ್ವಜಾವರೋಹಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net