ಹುಚ್ಚುನಾಯಿ ಕಡಿದು ಇಬ್ಬರು ಮಕ್ಕಳಿಗೆ ಗಾಯ

Published on

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಇಬ್ಬರು ಮಕ್ಕಳಿಗೆ ಹುಚ್ಚು ನಾಯಿ ಕಡಿದು ಅಸ್ವಸ್ಥರಾಗಿದ್ದಾರೆ.
ಗ್ರಾಮದ ಮಹದೇವಸ್ವಾಮಿ ಅವರ ಮಗ ಎಂ.ರಾಹುಲ್(4), ಮಹೇಶ್ ಅವರ ಮಗಳಾದ ಲಿಖಿತಾ(7) ಗಾಯಗೊಂಡವರು. ಇಬ್ಬರು ಶುಕ್ರವಾರ ಮನೆಯಿಂದ ಶಾಲೆಗೆ ತೆರಳುವಾಗ ಮಾರ್ಗ ಮಧ್ಯ ಹುಚ್ಚುನಾಯಿಗಳು ದಾಳಿ ಮಾಡಿ ಇಬ್ಬರ ಕಾಲು ಕಚ್ಚಿ ಗಾಯಗೊಳಿಸಿದೆ. ತಕ್ಷಣ ಸ್ಥಳೀಯರು ನೋಡಿ ಮಕ್ಕಳನ್ನು ರಕ್ಷಣೆ ಮಾಡಿದರು. ನಂತರ ಯಳಂದೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕ್ಸಿತೆ ನೀಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಿದರು.
ಘಟನೆಯಿಂದ ಗ್ರಾಮದ ಜನ ಭಯಬೀತರಾಗಿದ್ದು, ಚಿಕ್ಕ ಮಕ್ಕಳು ರಸ್ತೆಯಲ್ಲಿ ಹೋಗುವುದು ಕಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿ ಹೊರಗಡೆ ಬಿಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮತ್ತಷ್ಟು ಪ್ರಾಣಾಪಾಯ ಸಂಭವಿಸಬಹುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net