ಶಿರಸಿಯಲ್ಲಿ ಹೆಚ್ಚಾಗಿದೆ ಹುಚ್ಚು ನಾಯಿ ಕಾಟ

MAD DOG ATTACK
Published on

ಶಿರಸಿ: ನಗರದಲ್ಲಿ ಹುಚ್ಚು ನಾಯಿಗಳ ಹಾವಳಿ ಮತ್ತೆ ಜಾಸ್ತಿಯಾಗಿದೆ. ಬುಧವಾರ ಬೆಳಗಿನ ವೇಳೆ ವಿಹಾರಕ್ಕೆ ತೆರಳುತ್ತಿದ್ದ ಮಹಿಳೆಯ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ ಘಟನೆ ಇಲ್ಲಿಯ ಯಲ್ಲಾಪುರ ರಸ್ತೆಯಲ್ಲಿ ನಡೆದಿದೆ.

ಒಮ್ಮೆಲೇ ನಾಲ್ಕು ನಾಯಿಗಳು ಮಹಿಳೆಯನ್ನು ಬೆನ್ನತ್ತಿ ಬಂದಿದ್ದು, ಆಕೆ ಕೂಗಿಕೊಂಡಾಗ ಮೂರು ನಾಯಿಗಳು ಹೆದರಿ ಓಡಿವೆ. ಆದರೆ, ಹುಚ್ಚು ಹಿಡಿದಿದ್ದ ನಾಯಿ ಮಹಿಳೆಯ ಮೇಲೆ ದಾಳಿ ನಡೆಸಿ ಕಾಲಿನ ಮಾಂಸಖಂಡ ಕಿತ್ತಿವೆ. ಸ್ಥಳೀಯರು ಆಗಮಿಸಿ ಆಕೆಯನ್ನು ರಕ್ಷಿಸಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿಯೇ ನಾಯಿ ಕಚ್ಚಿದ ಹತ್ತಕ್ಕೂ ಹೆಚ್ಚು ಹೆಚ್ಚು ಪ್ರಕರಣಗಳು ನಡೆದಿದ್ದರೂ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿರುವ ಬಗ್ಗೆ ನಗರಸಭೆ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net