

ಚನ್ನಗಿರಿ: ಯಂತ್ರಗಳ ಮೂಲಕ ಭತ್ತ ನಾಟಿಯಿಂದ ಖರ್ಚು ಕಡಿಮೆ ಮತ್ತು ಸಮಯದ ಉಳಿತಾಯವಾಗುತ್ತದೆ. ರೈತರು ಇದರ ಅನುಕೂಲತೆ ಪಡೆಯಬೇಕು ಎಂದು ಜಿಲ್ಲಾ ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಕಾಕನೂರು ಎಂ.ಬಿ.ನಾಗರಾಜ್ ತಿಳಿಸಿದರು.
ಸಂತೆಬೆನ್ನೂರು ವ್ಯಾಪ್ತಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ತಣಿಗೆರೆ ಗ್ರಾಮದ ಪ್ರಗತಿಪರ ರೈತ ರಂಗಪ್ಪ ಅವರ ಭತ್ತದ ಗದ್ದೆಯಲ್ಲಿ ಬುಧವಾರ ಯಂತ್ರಶ್ರೀ ಯೋಜನೆಯಡಿ ಭತ್ತ ನಾಟಿಗೆ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ತಲ್ಲಣದ ಇಂದಿನ ದಿನಮಾನಗಳಲ್ಲಿ ರೈತರು ಪರಿತಪಿಸುವಂತಾಗಿದೆ. ಭತ್ತ ನಾಟಿ ಯಂತ್ರ ಬಳಕೆಯಿಂದ ಕೂಲಿ ಕಾರ್ವಿುಕರ ಕೊರತೆ, ಅಧಿಕ ವೆಚ್ಚ ಹಾಗೂ ಸಮಯದ ಅಭಾವ ಸರಿದೂಗಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಸಂಸ್ಥೆಯ ಕೃಷಿ ಅಧಿಕಾರಿ ವಿ.ಬಿ.ಅಜ್ಜಪ್ಪ ಮಾತನಾಡಿದರು. ಪ್ರಗತಿಪರ ರೈತ ಕೆ.ಎಸ್.ರಂಗಪ್ಪ, ರೈತ ಮೇಲ್ವಿಚಾರಕ ದಿನೇಶ್, ಸುಧಾ, ವೇದಮೂರ್ತಿ, ರಂಗಪ್ಪ, ರಂಗಸ್ವಾಮಿ, ನಾಗರಾಜ್, ಹಾಲೇಶ್, ಬಸವರಾಜ್, ಪರಮೇಶಪ್ಪ ಇತರರಿದ್ದರು.