

ಚಿತ್ರದುರ್ಗ: ಮಡಿವಾಳ ಮಾಚಿದೇವರ ವಚನಗಳ ಅಧ್ಯಯನದ ಅಗತ್ಯತೆ ಇಂದಿಗೂ ಇದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು. ಡಿಸಿ ಕಚೇರಿಯಲ್ಲಿ ಬುಧವಾರ ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಡಿ ವಾಳ ಮಾಚಿದೇವ ಜಯಂತಿ
ಕಾರ‌್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ವಚನಗಳ ಗಂಭೀರ ಅಧ್ಯಯನದಿಂದ ಅನೇಕ ವಿಚಾರಗಳನ್ನು ಅರಿಯುವುದರೊಂದಿಗೆ ಇಂದಿನ ಹಲವು ಸಮಸ್ಯೆಗಳಿಗೆ ಪರಿಹಾರವನ್ನೂ ಪಡೆಯಬಹುದಾಗಿದೆ.
ಕಲ್ಯಾಣ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರೂ ಒಬ್ಬರು. ವೃತ್ತಿ ಜತೆಗೆ ತಮ್ಮ ಪ್ರಖರ ಚಿಂತನೆಗಳೊಂದಿಗೆ,ಅಸಮಾನತೆ,ಜಾತೀಯತೆ ಮೊ ದಲಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡಿದ್ದರು. ಮಾಚಿದೇವರು ಕಾಯಕ ಶ್ರೇಷ್ಠತೆ ಸಾರಿದ ಮಹಾನ್ ದಾರ್ಶನಿಕರು.
ಸಮಾಜಕ್ಕೆ ಅವರು ಅತ್ಯುತ್ತಮ ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಉಪನ್ಯಾಸ ನೀಡಿದ ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಎನ್.ಎಸ್.ಮಹಂತೇಶ್,ರಾಜ್ಯದ ಇತಿ ಹಾಸದಲ್ಲಿ 12ನೇ ಶತಮಾನ ಬಹಳ ಮಹತ್ವಪೂರ್ಣವಾದ ಶತಮಾನವಾಗಿದೆ. ಇದನ್ನು ವಚನ,ವೈಚಾರಿಕ ಚಳವಳಿ ಹಾಗೂ ವೀರಶೈವ ಚಳವಳಿ ಎಂದೂ ಕರೆಯುತ್ತೇವೆ.
ವಚನ ಸಾಹಿತ್ಯದ ಆದ್ಯ ಪ್ರವರ್ತಕ ಜೇಡರ ದಾಸಿಮಯ್ಯ,ವಚನ ಸಾಹಿತ್ಯಕ್ಕೆ ವಿಶೇಷ ಸ್ವರೂಪ ನೀಡಿದ ಬಸವಣ್ಣ ಹಾಗೂ ವಚನ ಸಾಹಿತ್ಯದ ಸಂರಕ್ಷಕ ಮಡಿವಾಳ ಮಾಚಿದೇವ. ಹಾಗಾಗಿ ವಚನ ಸಾಹಿತ್ಯದಲ್ಲಿ ಜೇಡರ ದಾಸಿಮಯ್ಯ, ಬಸವಣ್ಣ ಹಾಗೂ ಮಡಿವಾಳ ಮಾಚಿದೇವರನ್ನು ಮರೆಯಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಇತಿಹಾಸದಲ್ಲಿ ಮಡಿವಾಳ ಸಮಾಜ ಬಹಳ ಶ್ರೇಷ್ಠವಾಗಿದ್ದು,ಕೀಳರಿಮೆ,ಅಜ್ಞಾನ ತೊರೆದು, ಸಮಾಜವನ್ನು ವಿಶೇಷವಾಗಿ ಗಮನಿಸಿದಾಗ ಅಭಿವೃದ್ಧಿ ಸಾಧ್ಯವೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ, ಕಾರ್ಯ ದರ್ಶಿ ಕೆ.ಆರ್.ಮಂಜುನಾಥ್, ಸಹ ಕಾರ್ಯದರ್ಶಿ ಶಿವಲಿಂಗಪ್ಪ,ಸಿ.ನಂಜುಂಡಸ್ವಾಮಿ, ಬಿ.ಲಕ್ಷ್ಮಣ,ಟಿ.ರುದ್ರಮುನಿ,ಎನ್.ಪ್ರಕಾಶ್, ಪರಶು ರಾಮ್,ನಾಗರಾಜ್,ರಂಗಸ್ವಾಮಿ,ರಮೇಶ್,ಕುಮಾರ್,ವೀಣಾ ಗೌರಣ್ಣ,ವಿನೋದಮ್ಮ,ರಂಗಮ್ಮ,ನಾಗಮ್ಮ,ರುದ್ರಮ್ಮ,ಗೀತಮ್ಮ ಮತ್ತಿತರರು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು. ಗಂಜಿಗಟ್ಟೆ ಕೃಷ್ಣಮೂರ್ತಿ ತಂಡದವರು ಗೀತಗಾಯನ ನಡೆಸಿಕೊಟ್ಟರು.