ಚಿಂತಾಮಣಿ: ಇತ್ತೀಚೆಗೆ ಅಮಹಮದ್ಬಾದ್ನಲ್ಲಿ ಹಮ್ಮಿಕೊಂಡಿದ ಐಸಿಎಸ್ಸಿ ಶಾಲಾ ಮಟ್ಟದ ರಾಷ್ಟ್ರೀಯ ಕ್ರಿಯೇಟಿವ್ ರೈಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿಂತಾಮಣಿ ನಗರದ ಹೊರವಲಯ ಜ್ಯೋತಿ ಆಂಗ್ಲ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ, ಜಿಲ್ಲೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ.ಅ.10ರಂದು ಗುಜರಾತ್ ರಾಜ್ಯದ ಅಮಹಮದ್ ಬಾದ್ನ ಜಾರ್ಜ ಹೆಸ್ ಮೆಮೋರಿಯಲ್ ನ್ಯಾಷನಲ್ ಲಿಟರರಿ ಕಾಂಫಿಟೀಷನ್ ಸ್ಪರ್ಧೆಗಳನ್ನು ಲಾಲ್ಜಿ ಮೆಮೋರಿಯಲ್ ಲಯನ್ಸ್ ಶಾಲೆಯಲ್ಲಿ ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಾನ್ವಿ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ವರ್ಕಿಯಾವಾಲಿದತ್ ತಿಳಿಸಿದ್ದಾರೆ.