ಮಾ. 13 ರಿಂದ ಶ್ರೀಶೈಲ ಪಾದಯಾತ್ರೆ

Ma. Srishaila Padayatra from 13
Published on

ವಿಜಯಪುರ : ನಗರದ ಜೋರಾಪುರ ಪೇಠ ಮಲ್ಲಯ್ಯನ ಓಣಿಯ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯು ಮಾ. 13 ರಿಂದ ಮಾ. 27 ರವರೆಗೆ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡ ರವೀಂದ್ರ ಕರ್ಪೂರಮಠ ತಿಳಿಸಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ಪಾದಯಾತ್ರೆ ಪ್ರಾರಂಭಿಸಿದ ಖ್ಯಾತಿಯ ನಮ್ಮ ಸಮಿತಿಗೆ ಇದ್ದು, ಈ ಬಾರಿ 32ನೇ ವರ್ಷದ ಪಾದಯಾತ್ರೆಯಾಗಿದೆ. ಹೋಳಿ ಹುಣ್ಣಿಮೆಯ ದಿನದಿಂದ ಯುಗಾದಿವರೆಗೆ 15 ದಿನ ಕಾಲ ಪಾದಯಾತ್ರೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಫೆ. 13 ರಂದು ರಾತ್ರಿ 10ಕ್ಕೆ ಜೋರಾಪುರ ಪೇಟೆಯ ಶ್ರೀ ಮಲ್ಲಿಕಾರ್ಜುನ ದೇವಾಲಯದಿಂದ ಪಾದಯಾತ್ರೆ ಪ್ರಾರಂಭವಾಗಲಿದ್ದು, ಹಿಟ್ನಳ್ಳಿಯಲ್ಲಿ ವಾಸ್ತವ್ಯ ನಡೆಯಲಿದೆ. ಮಾ. 14 ರಂದು ಬಸವನ ಬಾಗೇವಾಡಿಯಲ್ಲಿ, ಮಾ. 15 ರಂದು ಕೊಣ್ಣೂರ ಕ್ರಾಸ್, ಮಾ.16 ರಂದು ಹುಣಸಗಿ, ಮಾ.17 ರಂದು ದೇವಾಪೂರ ಕ್ರಾಸ್ ಸೂಗೂರ, ಮಾ.18 ರಂದು ದೇವದುರ್ಗ ತಾಲೂಕಿನ ಮಸರಕಲ್ಲ, ಮಾ.19 ರಂದು ಕಲಮಲಾ, ಮಾ.20 ರಂದು ಭಾವಿದೊಡ್ಡಿ, ಮಾ.21 ರಂದು ಆಯಿಜ, ಮಾ.22 ರಂದು ಆಲಂಪೂರ ಕ್ರಾಸ್, ಮಾ.23 ರಂದು ನಂದಿಕೊಟಕೂರ, ಮಾ.24 ರಂದು ಪಾಲಂಪಾಲ, ಮಾ.25 ರಂದು ಆತ್ಮಕೂರ ಹಾಗೂ ಮಾ. 26-27 ರಂದು ಪಾದಯಾತ್ರೆಯು ಶ್ರೀಶೈಲ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.

ಆಸಕ್ತ ಭಕ್ತರು ತಮ್ಮ ಹೆಸರುಗಳನ್ನು ರವೀಂದ್ರ ಕರ್ಪೂರಮಠ ಮೊ. 8884447791, ಶರಣಬಸಪ್ಪ ಚನ್ನಿಗಾವಿಶೆಟ್ರು ಮೊ. 8618406986, ಶರಣಯ್ಯ ಮಠಪತಿ ಮೊ. 8073342193, ಧರೆಪ್ಪ ಶ್ಯಾಪೇಟಿ ಮೊ. 8310879947ಕ್ಕೆ ಸಂಪರ್ಕಿಸುವಂತೆ ಸಮಿತಿಯ ರವೀಂದ್ರ ಕರ್ಪೂರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net