ಅಧ್ಯಕ್ಷರಾಗಿ ಎಂ.ಟಿ.ಸುರೇಶ್ ಕಂಠಿ ಆಯ್ಕೆ

08M.D.R.1
ಮದ್ದೂರು ತಾಲೂಕಿನ ಮಾಲಗಾರನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಟಿ.ಸುರೇಶ್ ಕಂಠಿ ಹಾಗೂ ಉಪಾಧ್ಯಕ್ಷರಾಗಿ ಎನ್.ಎನ್ ಪಲ್ಲವಿ ದೇವರಾಜು ಅವಿರೋಧವಾಗಿ ಆಯ್ಕೆಯಾದರು. ಎ.ಎಸ್.ರಾಮಕೃಷ್ಣ, ಎಂ.ಸಿ.ಪ್ರಸನ್ನಕುಮಾರ, ಎಂ.ರಾಜೇಶ್, ಎಂ.ಕೆ. ಸುಧಾಕರ್, ಎ.ಸಿ.ಕುಮಾರ್, ರವಿ, ರಾಜು, ಪ್ರಭಾಕರ್ ಇದ್ದರು.
Published on

ಮದ್ದೂರು: ತಾಲೂಕಿನ ಮಾಲಗಾರನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಟಿ.ಸುರೇಶ್ ಕಂಠಿ ಹಾಗೂ ಉಪಾಧ್ಯಕ್ಷರಾಗಿ ಎನ್.ಎನ್.ಪಲ್ಲವಿ ದೇವರಾಜು ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್‌ಕಂಠಿ, ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಎನ್.ಪಲ್ಲವಿ ದೇವರಾಜು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾ ಅಧಿಕಾರಿ ಸುಧಾಕರ್ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಎಂ.ಟಿ.ಸುರೇಶ್ ಕಂಠಿ ಮಾತನಾಡಿ, ನಿರ್ದೇಶಕರ ವಿಶ್ವಾಸ ಪಡೆದು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತೇನೆ ಭರವಸೆ ನೀಡಿದರು.

ಸಂಘದ ನಿರ್ದೇಶಕರಾದ ಎ.ಎಸ್.ರಾಮಚಂದ್ರ, ಎ.ಎಚ್.ರಮೇಶ್, ಸುಜಯ, ಎಂ.ಸಿ.ಕುಮಾರ, ಎಂ.ಸಿ.ಸತೀಶ್, ಎಂ.ಸಿ.ಜಗದೀಶ್, ಮಲ್ಲಣ್ಣ, ಮರಿಸ್ವಾಮಿ, ಕಾರ್ಯದರ್ಶಿ ನಂಜುಂಡಸ್ವಾಮಿ, ಮುಖಂಡರಾದ ಎ.ಎಸ್.ರಾಮಕೃಷ್ಣ, ಎಂ.ಸಿ.ಪ್ರಸನ್ನಕುಮಾರ, ಎಂ.ರಾಜೇಶ್, ಎಂ.ಕೆ. ಸುಧಾಕರ್, ಎ.ಸಿ.ಕುಮಾರ್, ರವಿ, ರಾಜು, ಪ್ರಭಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net