ಶ್ರೀಶೈಲ ಜಗದ್ಗುರುಗಳಿಗೆ ಕರೊನಾ ಪಾಸಿಟಿವ್! ಕೆಲ ದಿನಗಳ ಹಿಂದಷ್ಟೇ ಪ್ರವಾಸ ಮಾಡಿದ್ದ ಶ್ರೀಗಳು

corona
Published on

ಚಿಕ್ಕೋಡಿ: ರಾಜ್ಯಾದ್ಯಂತ ಕರೊನಾ ದಾಳಿ ಮುಂದುವರಿದಿದ್ದು, ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೂ ಕರೊನಾ ಸೋಂಕು ತಗುಲಿದೆ. ಸದ್ಯ ಅವರು ಯಡೂರಿನಲ್ಲಿ ಹೋಂ ಐಸೋಲೇಶನ್​ಗೆ ಒಳಗಾಗಿದ್ದಾರೆ.

ಶ್ರೀಗಳು ಯುಗಾದಿ ನಿಮಿತ್ತವಾಗಿ ಶ್ರೀಶೈಲಕ್ಕೆ ತೆರಳಿದ್ದರು. ಅಲ್ಲಿಂದ ಯಡೂರಿಗೆ ವಾಪಾಸಾದ ನಂತರ ಅವರಲ್ಲಿ ಜ್ವರ ಕಾಣಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು. ಬುಧವಾರದಂದು ಕರೊನಾ ವರದಿ ಬಂದಿದ್ದು ಅದರಲ್ಲಿ ಅವರಿಗೆ ಸೋಂಕು ತಗುಲಿರುವುದು ದೃಢವಾಗಿದೆ.

ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಹೋಂ ಐಸೋಲೇಶನ್​ನಲ್ಲಿದ್ದು, ಸೂಕ್ತ ಚಿಕಿತ್ಸೆ ಪಡೆಯುವುದಾಗಿ ತಿಳಿಸಿರುವ ಅವರು ಭಕ್ತಾದಿಗಳು ಆತಂಕ ಪಡಬಾರದೆಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net