ಯೂತ್ ಐಕಾನ್ ಸಮ್ಮೇಳನಕ್ಕೆ ಎಂ.ಪ್ರಿಯಾಂಕಾ ಆಯ್ಕೆ

ಪ್ರಿಯಾಂಕ ಎಂ
ಎಂ.ಪ್ರಿಯಾಂಕಾ
Published on

ಎಚ್.ಡಿ.ಕೋಟೆ: ಮೇ 15 ಮತ್ತು 16ರಂದು ಎರಡು ದಿನ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ಯೂತ್ ಐಕಾನ್-2025 ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಎನ್‌ಎಸ್‌ಎಸ್ ಸ್ವಯಂ ಸೇವಕಿಯಾಗಿ, ಮೈಸೂರು ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ಪದವಿ ವಿದ್ಯಾರ್ಥಿನಿ ಎಂ.ಪ್ರಿಯಾಂಕಾ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಜೆ.ಎನ್.ವೆಂಕಟೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಕಾರ್ಯಕ್ರಮವು ಕ್ರಿಯಾತ್ಮಕ ಮತ್ತು ದೂರ ದೃಷ್ಟಿಯ ವೇದಿಕೆಯಾಗಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಚರ್ಚಿಸಲು ಮತ್ತು ರೂಪಿಸಲು ವಿಶ್ವದಾದ್ಯಂತ ಯುವ ನಾಯಕರನ್ನು ಶಿಕ್ಷಣ ತಜ್ಞರು ನೀತಿ ನಿರೂಪಕರು ಮತ್ತು ತಜ್ಞರನ್ನು ಒಟ್ಟುಗೂಡಿಸುವ ಉದ್ದೇಶ ಹೊಂದಿದೆ. ಇಲ್ಲಿ ಮುಖ್ಯ ಭಾಷಣಗಳು, ಪ್ಯಾನಲ್ ಚರ್ಚೆಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಸಮ್ಮೇಳನವು ಒಳಗೊಂಡಿದೆ. ಮೈಸೂರು ವಿಶ್ವವಿದ್ಯಾಲಯದಿಂದ ನಮ್ಮ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂ ಸೇವಕಿಯಾಗಿ ಎಂ.ಪ್ರಿಯಾಂಕಾ ಅವರನ್ನು ನಿಯೋಜಿಸಿರುವುದು ತಾಲೂಕು ಮತ್ತು ಕಾಲೇಜಿಗೆ ಕೀರ್ತಿ ತಂದಿದೆ ಎಂದು ತಿಳಿಸಿದ್ದಾರೆ.

ಯೂತ್ ಐಕಾನ್-2025 ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಗೆ ಭಾಗವಹಿಸಲು ಅವಕಾಶ ದೊರಕಿರುವುದು ಸಂತಸ ತಂದಿದೆ ಎಂದು ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಅಭಿನಂದಿಸಿದ್ದಾರೆ.

ಸಂಸ್ಥೆಯ ಗೌರವಾನ್ವಿತ ಆಡಳಿತ ಅಧಿಕಾರಿ ಪ್ರೊ.ಕೆ.ಪಿ.ಬಸವೇಗೌಡರು ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net