"ಶಾಸಕ ಜಮೀರ್ ಅನೈತಿಕ ಚಟುವಟಿಕೆಗಳಿಂದಲೇ ಆರ್ಥಿಕ, ರಾಜಕೀಯವಾಗಿ ಬೆಳೆದವರು"

Jameer Ahmad Khan
Published on

ದಾವಣಗೆರೆ: ಶಾಸಕ ಜಮೀರ್ ಅಹಮದ್ ಅನೈತಿಕ ಚಟುವಟಿಕೆಗಳಿಂದಲೇ ಆರ್ಥಿಕ, ರಾಜಕೀಯವಾಗಿ ಬೆಳೆದವರು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

ಹೊನ್ನಾಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಮೀರ್ ದುಬೈ, ಶ್ರೀಲಂಕಾ ದೇಶಗಳಿಗೆ ಹೋಗಿ ಕ್ಯಾಸಿನೊಗಳಲ್ಲಿ ಭಾಗಿಯಾಗುತ್ತಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬರಲಿದೆ ಎಂದರು.

ಜಮೀರ್ ಅಹಮದ್ ರಾಜಕೀಯ ಸನ್ಯಾಸ ಸ್ವೀಕರಿಸಲಿ ಎಂದು ಸವಾಲು ಹಾಕಿದರು. ಜಮೀರ್ ಎರಡು ನಾಲಿಗೆಯ ವ್ಯಕ್ತಿ. ಚಿಲ್ಲರೆ ಗಿರಾಕಿ, ಗುಜರಿ ಗಿರಾಕಿ. ಬಿ.ಎಸ್. ವೈ ಸಿಎಂ ಆದರೆ ಅವರ ಮನೆಯ ಬಾಗಿಲಲ್ಲಿ ವಾಚ್ ಮನ್ ಆಗುವುದಾಗಿ ಹೇಳಿ ಮಾತು ತಪ್ಪಿದರು ಎಂದರು.

ಡ್ರಗ್ ಮಾಫಿಯಾದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ಮಟ್ಟ ಹಾಕಲಿದೆ. ಸ್ವತಂತ್ರವಾಗಿ ತನಿಖೆ ಮಾಡಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಹಿಂದಿನ ಸರ್ಕಾರಗಳ ವೈಫಲ್ಯದಿಂದಲೇ ಡ್ರಗ್ ಮಾಫಿಯಾ ಈ ಮಟ್ಟಕ್ಕೆ ಬೆಳೆದಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net