ಭಾರತ ಭಯೋತ್ಪಾದನೆ ಸಹಿಸದು

16nmt1-photo
Published on

ನ್ಯಾಮತಿ: ಭಾರತೀಯ ಸೇನಾಪಡೆ ಆಪರೇಷನ್ ಸಿಂಧೂರ ಎನ್ನುವ ಕಾರ್ಯಾಚರಣೆ ಮೂಲಕ ಪಾಕಿಸ್ತಾನಕ್ಕೆ ಹಾಗೂ ಉಗ್ರರಿಗೆ ತಕ್ಕ ಉತ್ತರ ನೀಡಿ, ಇಡೀ ವಿಶ್ವಕ್ಕೆ ದೇಶದ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಬೆಳಗುತ್ತಿ, ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಸೋಮವಾರ ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ತಿರಂಗಾಯಾತ್ರೆಯಲ್ಲಿ ಮಾತನಾಡಿದರು.

ಆಪರೇಷನ್ ಸಿಂಧೂರದ ಬಗ್ಗೆ ಕಾಂಗ್ರೆಸ್​ನ ಕೆಲವು ನಾಯಕರು, ಸಚಿವರು ಅಪಸ್ವರ ಎತ್ತಿದ್ದು ಅವರಲ್ಲೇ ದ್ವಂದ್ವ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು, ಕಾರ್ಯತಂತ್ರ ರೂಪಿಸಲು ಸೂಚಿಸಿ ರಾಜತಾಂತ್ರಿಕವಾಗಿ ಪಾಕ್ ಜತೆಗಿನ ಎಲ್ಲ ಸಂಬಂಧವನ್ನು ಕಡಿತಗೊಳಿಸಿ, ಸಿಂಧೂ ಜಲ ಒಪ್ಪಂದವನ್ನು ರದ್ದುಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಭಯೋತ್ಪಾದಕರ ರಾಷ್ಟ್ರ ಎಂಬುದನ್ನು ಸಾರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಿರಂಗಾಯಾತ್ರೆ ಸಾಗಿತು. ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಅರೆಕೆರೆ ನಾಗರಾಜ್, ಹೊನ್ನಾಳಿ ಅಧ್ಯಕ್ಷ ಹನುಮಂತಪ್ಪ, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಪ್ರಧಾನ ಕಾರ್ಯದರ್ಶಿ ಮಾರುತಿನಾಯ್್ಕ ಶಿವಾನಂದ್, ಕುಳಗಟ್ಟೆ ರಂಗನಾಥ್, ಶ್ರೀಧರ್, ಹೊನ್ನಾಳಿ ರಂಗಪ್ಪ, ಬೀರಪ್ಪ ಸೇರಿ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net