

ಪಂಚನಹಳ್ಳಿ: ಪಂಚನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ
ಎಂ.ಓಂಕಾರಪ್ಪ ಮತ್ತು ಉಪಾಧ್ಯಕ್ಷರಾಗಿ ಕೊಟ್ಟೂರಮ್ಮ ಅವಿರೋಧವಾಗಿ ಆಯ್ಕೆಯಾದರು.
ನಂತರ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ ಎಂ.ಓಂಕಾರಪ್ಪ ಮಾತನಾಡಿ,
ನಿರ್ದೇಶಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿ
ಪಂಚನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಅಭಿವೃದ್ಧಿಗೆ ಶ್ರಮಿಸಲಾಗುವುದು.
ಪ್ರತಿಯೊಂದು ಸಹಕಾರಿ ಸಂಘಗಳು ಸಹ ರೈತರ ಬೆನ್ನೆಲುಬಾಗಿ ನಿಲ್ಲಬೇಕು ಆಗ ಮಾತ್ರ
ಸಹಕಾರಿ ಸಂಘಗಳು ಮತ್ತು ರೈತರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗಲು ಸಾಧ್ಯ
ಎಂದರು.
ಹಿರಿಯ ನಿರ್ದೇಶಕ ಪಿ.ಎಂ. ಪಾಪಣ್ಣ ಮಾತನಾಡಿ, ಸಹಕಾರಿ ಸಂಘ ಎಂಬುದು ರೈತರ
ಪಾಲಿಗೆ ವರದಾನ ರೈತರಿಗೆ ಅನುಕೂಲವಾಗುವಂತಹ ಪೂರಕ ಯೋಜನೆಗಳನ್ನು
ಅನುಷ್ಠಾನಕ್ಕೆ ತರಬೇಕು. ಸಹಕಾರಿ ಸಂಘಗಳಲ್ಲಿ ದೊರೆಯುವ ಪ್ರತಿಯೊಂದು ಯೋಜನೆಯೂ
ಸಹ ಎಲ್ಲ ರೈತರಿಗೂ ಸಹ ತಲುಪುವ ಹಾಗೆ ಆಡಳಿತ ಮಂಡಳಿ ಕಾರ್ಯನಿರ್ವಹಿಸಬೇಕು.
ರೈತರಿಗೆ ಸಕಾಲದಲ್ಲಿ ಕೃಷಿಗೆ ಪೂರಕವಾದ ಸೌಲಭ್ಯಗಳನ್ನು ಸಹಕಾರಿ ಸಂಘ ಒದಗಿಸಿ
ಕೊಡಬೇಕು ಎಂದು ತಿಳಿಸಿದರು.
ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಅನುಪಮಾ ಚುನಾವಣಾಧಿಕಾರಿಯಾಗಿ ಕರ್ತವ್ಯ
ನಿರ್ವಹಿಸಿದರು. ನಂತರ ನಗರದ ಅಭಿನಂದನ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ರೇಣುಕಾ
ಮೂರ್ತಿ, ಶಿವರಾಜ್, ಮಹೇಶ್ವರಪ್ಪ, ಪ್ರದೀಪ್, ಗೌರಮ್ಮ, ಆನಂದ್, ಕಿರಣ್, ಕುಮಾರ
ನಾಯ್ಕ, ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ರಂಗನಾಥ್, ಸಾವೆ ಮರಳಪ್ಪ,
ಸಂತೋಷ್,ಶರತ್, ಸಂಘದ ಕಾರ್ಯದರ್ಶಿ ಶಿವಕುಮಾರ್ ಇದ್ದರು.