

ಮಂಡ್ಯ: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಪೀಠದ ಕಡೆಗೆ ಶೂ ಎಸೆಯಲ್ನೆತಿಸಿರುವುದು ದೇಶ ದ್ರೋಹಿ ಕೃತ್ಯ ಹಾಗೂ ಸಂವಿಧಾನಕ್ಕೆ ಮಾಡಿರುವ ದೊಡ್ಡ ಅಪಮಾನವೆಂದು ಜಾತ್ಯತೀತ ಜನತಾ ದಳದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಲ್ ತುಳಸೀಧರ್ ಖಂಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವ ವ್ಯಕ್ತಿ 71 ವರ್ಷದ ವಕೀಲನಾಗಿದ್ದು, ವೃತ್ತಿಗೆ ಅವಮಾನ ಮಾಡಿದ್ದಾನೆ. ಭಾರತ ಸಂವಿಧಾನದಡಿ ಇವತ್ತು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ದಲಿತ ಸಮುದಾಯದಿಂದ ಬಂದ ಗವಾಯಿ ಅವರು ಅಡೆ ತಡೆಗಳನ್ನು ದಾಟಿ ಸಂವಿಧಾನವನ್ನು ಎತ್ತಿ ಹಿಡಿಯುತ್ತಿರುವುದನ್ನು ಸಹಿಸಲಾಗದೆ ಈ ಕೃತ್ಯವ್ಯಸಗಿದ್ದಾರೆಂದು ಕಿಡಿಕಾರಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಮನುವಾದಿಗಳ ಮನಸ್ಸಿನಲ್ಲಿ ತಾಂಡವಾಡುತ್ತಿದೆ. ಈ ಕೃತ್ಯ ಎಸೆಗಿರುವ ರಾಕೇಶ್ ಶರ್ಮ ಅವರನ್ನು ವಕೀಲ ವೃತ್ತಿಯಿಂದ ವಜಾಗೊಳಿಸುವುದಲ್ಲದೆ, ದೇಶದ್ರೋಹಿ ಕೃತ್ಯವೆಂದು ಪ್ರಕರಣ ದಾಖಲಿಸಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.