ಬೆಂ. ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಮೆರವಣಿಗೆ

M Krishnappa
Published on

ಬೆಂಗಳೂರು ದಕ್ಷಿಣ: ಕ್ಷೇತ್ರ ವ್ಯಾಪ್ತಿಯ ದೊಡ್ಡ ತೋಗೂರು ಗ್ರಾಪಂ ಭಾಗದ ವಿಪ್ರೋ ಗೇಟ್ ನೀಲಾದ್ರಿನಗರ, ಇನ್ವೆಸ್ಟ್‌ಮೆಂಟ್ ಲೇಔಟ್ ಮತ್ತು ಕೋನಪ್ಪನ ಅಗ್ರಹಾರ ಪಂಚಾಯಿತ್ತಿಯ ಗೋವಿಂದಶೆಟ್ಟಿ ಪಾಳ್ಯ, ಕೃಷ್ಣಾರೆಡ್ಡಿ ಲೇಔಟ್, ದೊಡ್ಡ ನಾಗಮಂಗಲ ಹಾಗೂ ನಾಗನಾಥಪುರ ವಾರ್ಡ್‌ನ ಪರಪ್ಪನ ಅಗ್ರಹಾರ, ಕೆಂಪೇಗೌಡ ಸರ್ಕಲ್‌ನ ಪ್ರಮುಖ ರಸ್ತೆ ಗಳಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ರೋಡ್ ಶೋ ನಡೆಸಿದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರ ಕೃಷ್ಣಪ್ಪ ಜತೆಯಾದ ನೂರಾರು ನಾಗರಿಕರು, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಜತೆಗೂಡಿ ಜೈಕಾರ ಹಾಕುತ್ತ ಬೆಂಬಲ ವ್ಯಕ್ತಪಡಿಸಿದರು.

ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ಹೊಸ ಪರ್ವವೇ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಬಹುಮತದ ಬಿಜೆಪಿ ಸರ್ಕಾರ ಬರಲಿದ್ದು, ಈ ಬಾರಿ ಬಿಜೆಪಿಯನ್ನು ಬೆಂಬಲಿಸುತ್ತೇವೆ, ಅತಿ ಹೆಚ್ಚಿನ ಮತಗಳಿಂದ ಜಯಶೀಲರನ್ನಾಗಿ ಮಾಡುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದ್ದೇವೆ ಎಂದು ನಾಗರಿಕರು ಕೂಗುತ್ತಿದ್ದ ದೃಶ್ಯ ಕಂಡುಬಂತು.

ರೋಡ್ ಶೋನಲ್ಲಿ ಮಾಜಿ ಜಿಪಂ- ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರಿದ್ದರು.

ಜನಪರವಾಗಿರುವ ಬಿಜೆಪಿಗೆ ಈ ಬಾರಿ ಕೃಷ್ಣ ಜನಾದೇಶ ಕೊಡುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಜತೆಯಾಗಿ ನಿಲ್ಲಲು ಕ್ಷೇತ್ರದ ಮತದಾರರು ತೀರ್ಮಾನಿಸಿದ್ದಾರೆ. | ಎಂ. ಕೃಷ್ಣಪ್ಪ ಬಿಜೆಪಿ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net