

ಕುಶಾಲನಗರ: ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯಿಂದ ಸೋಮವಾರಪೇಟೆ ತಾಲೂಕು ಬಿ.ಇ.ಓ ಆಗಿ ವರ್ಗಾವಣೆಗೊಂಡ ಎಂ.ಕೃಷ್ಣಪ್ಪ ಅವರು ಅಧಿಕಾರ ವಹಿಸಿಕೊಂಡರು.
ನೂತನ ಬಿಇಓ ಕೃಷ್ಣಪ್ಪ ಅವರನ್ನು ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಮುಖರು ಹೂಗುಚ್ಛ ನೀಡಿ ಸ್ವಾಗತಿಸಿ ಅಭಿನಂದಿಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಂದ್ರ,ಖಜಾಂಚಿ ಎ.ಸಿ.ಮಂಜುನಾಥ್, ತಾಲೂಕು ಸಂಘದ ಉಪಾಧ್ಯಕ್ಷ ಜಯಕುಮಾರ್, ರಾಣಿರವೀಂದ್ರ ಭಾಗವಹಿಸಿದ್ದರು.