ಎಂ.ಕೆ.ಭಾಸ್ಕರ್ ರಾವ್ ಸಮಾಜಮುಖಿ ಜೀವಿ

xr:d:DAGBu5hcdsA:2,j:6392157888674105278,t:24040711
xr:d:DAGBu5hcdsA:2,j:6392157888674105278,t:24040711
Published on

ರಾಯಚೂರು: ಸಾಮಾನ್ಯನಂತೆ ಸರಳ ಜೀವಿಯಾಗಿ ಬದುಕಿದ ಪತ್ರಕರ್ತ ಎಂ.ಕೆ.ಭಾಸ್ಕರ್ ರಾವ್ ಅವರು ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಹಿರಿಯ ರಂಗಕರ್ಮಿ ವಿ.ಎನ್.ಅಕ್ಕಿ ಹೇಳಿದರು.

ನಗರದ ಕಸಾಪ ಭವನದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್ ರಾವ್‌ಗೆ ನುಡಿನಮನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಭಾಸ್ಕರ್ ರಾವ್ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕ ಸೇವೆ ಮಾಡಿದವರು. ಬಡವರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ಮತ್ತೊಬ್ಬರಿಗೆ ಸ್ಪಂದಿಸುವ ವಿಶಾಲಗುಣ ಅವರಲ್ಲಿ ಇತ್ತು ಎಂದು ಹೇಳಿದರು.

ಹೋರಾಟಗಾರ ಬಸವರಾಜ ಕಳಸ ಮಾತನಾಡಿ, ಭಾಸ್ಕರ್ ರಾವ್ ಜಿಲ್ಲೆಯಲ್ಲಿ ನಡೆದ ಅನೇಕ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತವರು. ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ವಿಧಾನಸೌಧದಲ್ಲಿ ಚರ್ಚಿಸುವಂತೆ ವರದಿಗಳು ಮಾಡಿದ್ದರು. ಸಮಾಜಮುಖಿ ಆಲೋಚನೆಯಿಂದ ಚಾಣಾಕ್ಷತೆ ಬುದ್ಧಿವಂತಿಕೆಯಿಂದ ಸಮಾಜ ಅವರನ್ನು ಗುರುತಿಸುವಂತೆ ಮಾಡಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net