ಡಿ 14, 15 ರಂದು ಎಂ.ಜಿ.ಎಂ. ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ

12udp bharathiya nruthya sangeetha
Published on

ಉಡುಪಿ: ಭರತ ನೃತ್ಯ ಸಂಗೀತಾ ಅಕಾಡೆಮಿ ಮತ್ತು ನೂಪುರ ಕಲಾವಿದರು ಸಾಂಸತಿಕ ಟ್ರಸ್ಟ್​ ಆಶ್ರಯದಲ್ಲಿ ಎಂ.ಜಿ.ಎಂ. ಕಾಲೇಜಿನ ಸಹಯೋಗದೊಂದಿಗೆ ಡಿ.14 ಮತ್ತು 15 ರಂದು ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ 2 ದಿನಗಳ ನೃತ್ಯ ಮತ್ತು ಪ್ರದರ್ಶನ ಕಲೆಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಮೈಸೂರಿನ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್​ ತಿಳಿಸಿದ್ದಾರೆ.

14 ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಸಂಗೀತಾ ನೃತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ವಿದ್ವಾನ್​ ಆನೂರು ಅನಂತ ಕೃಷ್ಣಶರ್ಮ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷಿ$್ಮನಾರಾಯಣ ಕಾರಂತ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷ ವಿದ್ವಾನ್​ ಪ್ರವಿಣ್​ ಯು.ಕೆ. ಆಗಮಿಸಲಿದ್ದಾರೆ.

ಸಮ್ಮೇಳನದಲ್ಲಿ ವಿದ್ವಾನ್​ ಅನೂರು ಅನಂತ ಕೃಷ್ಣ ಶರ್ಮ ಅವರು "ಸಂಗೀತ ಮತ್ತು ನೃತ್ಯದಲ್ಲಿ ಮೃದಂಗದ ಪಾತ್ರ" ಹಾಗೂ ಪ್ರೊ. ಕೆ. ರಾಮಮೂರ್ತಿ ರಾವ್​ ಅವರು "ಕಲಾವಿಮರ್ಶೆ" ಹಾಗೂ ಡಾ. ಪದ್ಮನಿ ಶ್ರೀಧರ್​ ಅವರು "ಸೂಳಾಧಿಗಳು ಹಾಗು ದಾಮೋದರ ಪಂಡಿತನ ಸಂಗೀತ ದರ್ಪಣದ" ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಬೆಂಗಳೂರಿನ ಡಾ. ರಶ್ಮಿ ಪ್ರಸಾದ್​, ಉಡುಪಿಯ ವಿದ್ವಾನ್​ ರಾಮಕೃಷ್ಣ ಕೊಡಂಚ, ಬೆಂಗಳೂರಿನ ಕೌಸಲ್ಯ ನಿವಾಸ್​, ದಾಳಿ ನಂದನ ಕೃಷ್ಣ ಕುಮಾರ್​, ಮಣಿಪಾಲದ ಡಾ. ಅನ್ನಪೂರ್ಣ ಆಚಾರ್​ ಹಾಗು ಮಂಗಳೂರಿನ ವಿದೂಷಿ ಶಾರದಮಣಿ ಶೇಖರ್​ ಅವರು ವಿವಿಧ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕ ನೀಡಲಿದ್ದಾರೆ. ಸಾಯಂಕಾಲ ನೃತ್ಯಾನಿಕೇತನ ಕೊಡವೂರಿನ ವಿದ್ವಾನ್​ ಸುಧೀರ್​ ಕೊಡವೂರು ಹಾಗೂ ಮಾನಸಿ ಸುಧೀರ್​ ನೇತೃತ್ವದಲ್ಲಿ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.

15 ರಂದು ಬೆಳಿಗ್ಗೆ ಯಕ್ಷಗಾನ ಮತ್ತು ಭರತ ನಾಟ್ಯದ ಸಾಮ್ಯತೆ ಹಾಗು ವೈಷಮ್ಯದ ಬಗ್ಗೆ ವಿದೂಷಿ ಸುಮಂಗಲ ರತ್ನಕರಾ ರಾವ್​ ಪ್ರಧಾನ ಭಾಷಣ ಮಾಡಲಿದ್ದಾರೆ. ನಂತರ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳನ್ನು ಹೆಚ್ಚು ಜನಪ್ರಿಯತೆ ಗಳಿಸುವ ಬಗ್ಗೆ ಸಮೂಹ ಚರ್ಚೆ ನಡೆಯಲಿದ್ದು, ನೃತ್ಯ ಗುರುಗಳಾದ ಚಂದ್ರಶೇಖರ್​ ನಾವಡ, ವಿದ್ಯಾಶ್ರೀ ರಾಧಾಕೃಷ್ಣ, ದೀಪಕ್​ ಕುಮಾರ್​, ಸುಧೀರ್​ ಕೊಡವೂರು ಭಾಗವಹಿಸಲಿದ್ದಾರೆ. ವಿದ್ವಾನ್​ ಶ್ರೀರಾಮ್​ ಭಟ್​, ವಿದೂಷಿ ವೀಣಾ ಸಾಮಗ, ಡಾ. ಶುಭಾರಾಣಿ ಬೋಳಾರ್​, ಖುಷ್ಬು ಚಾದವ್​ ವಿವಿಧ ವಿಫಿಯಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ಸಾಯಂಕಾಲ 5 ಗಂಟೆಗೆ ಸಮಾರೋಪದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮಾಜಿ ಕುಲಸಚಿವ ಪ್ರೊ. ಶಿವರಾಮ್​ ಅಧ್ಯಕ್ಷತೆ ವಹಿಸಲಿದ್ದು, ರಂಜಿನಿ ಮೆಮೋರಿಯಲ್​ ಟ್ರಸ್ಟ್​ನ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್​ ಸಮಾರೋಪ ಭಾಷಣ ಮಾಡಲಿದ್ದಾರೆ. ವೈಕುಂಠ ಬಾಳಿಗ ಲಾ ಕಾಲೇಜಿನ ನಿರ್ದೇಶಿಕಿ ಡಾ. ಕೆ. ನಿರ್ಮಲಾ ಕುಮಾರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ಬೆಂಗಳೂರಿನ ಕೌಸಲ್ಯ ನಿವಾಸ್​ ತಂಡದವರಿಂದ "ಹನುಮಾನ್​ ಚಾಲೀಸ್​" ಮತ್ತು ಡಾ. ಶುಭಾರಾಣಿ ಬೋಳಾರ್​ ಶಿಷ್ಯರಿಂದ "ಮೋಕ್ಷ" ನೃತ್ಯ ರೂಪಕದ ಪ್ರದರ್ಶನವಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಎನ್​.ಸಿ.ಪಿ.ಎ ಅಧ್ಯಕ್ಷೆ ಡಾ.ಶುಭಾರಾಣಿ ಬೋಳಾರ್​, ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷಿ$್ಮನಾರಾಯಣ ಕಾರಂತ್​, ವಿಬಿಸಿಎಲ್​ ಕಾಲೇಜಿನ ನಿರ್ದೇಶಕಿ ಡಾ.ಕೆ.ನಿರ್ಮಲಾ ಕುಮಾರಿ, ರಾಧಾಕೃಷ್ಣ ನೃತ್ಯನಿಕೇತನದ ನಿರ್ದೇಶಕಿ ವೀಣಾ ಸಾಮಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net