

ತೀರ್ಥಹಳ್ಳಿ: ಹಸೆಮಣೆ ಏರಲು ಕೇವಲ 13 ದಿನ ಬಾಕಿ ಇರುವಾಗ ಯುವತಿ ಭಾನುವಾರ ನಸುಕಿನಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಲೂಕಿನ ಕಟ್ಟೆಹಕ್ಲು ಚೈತ್ರಾ (26) ಮೃತಳು. ಫೆಬ್ರವರಿ 4ರಂದು ಚೈತ್ರಾಗೆ ಬಿದರಗೋಡಿನ ವರನೊಂದಿಗೆ ಮದುವೆ ನಿಗದಿ ಪಡಿಸಲಾಗಿತ್ತು. ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಳು. ಶನಿವಾರ ರಾತ್ರಿ ಮದುವೆ ಬೇಡ ಎಂದು ಪಾಲಕರಿಗೆ ತಿಳಿಸಿದ್ದಳು ಎನ್ನಲಾಗಿದೆ. ಬೆಳಗಿನ ಜಾವ ಮನೆಯ ಹಿಂಭಾಗದ ಬಚ್ಚಲು ಮನೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಶವ ದೊರೆತಿದೆ. ಎಂಕಾಂ ಪದವೀಧರೆ ಆಗಿರುವ ಚೈತ್ರಾ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್ನಲ್ಲಿ ಕೆಲಸ ಮಾಡುತ್ತಿದ್ದಳು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.