

ಚಿತ್ರದುರ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ನೇಮಕವಾಗಿರುವ ಶಾಸಕ ಎಂ.ಚಂದ್ರಪ್ಪ ಅವರನ್ನು ನಗರದ ಭೋವಿ ಗುರು ಪೀಠದಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೋಮವಾರ ಗೌರವಿಸಿದರು. ಈ ವೇಳೆ ಮಾತನಾಡಿದ ಶ್ರೀಗಳು, ಚಂದ್ರಪ್ಪ ಸಾರಿಗೆ ಕ್ಷೇತ್ರದಲ್ಲಿ ರಾಷ್ಟ್ರ, ಅಂತರಾಷ್ಟ್ರೀಯಮಟ್ಟದಲ್ಲಿ ಹೆಸರು ತರುವಂಥ ರೀತಿಯಲ್ಲಿ ಕೆಲಸ ಮಾಡಲಿ. ಸಾರಿಗೆ ಕ್ಷೇತ್ರದಲ್ಲಿ ಮಾದರಿ ಕೆಲಸಗಳು ಅವರಿಂದಾಗಲಿ ಎಂದರು. ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಮುಖಂಡರಾದ ರುದ್ರಪ್ಪ, ಫಣಿಯಪ್ಪ, ಮಹಾಂತೇಶ್ ಮತ್ತಿತರರು ಇದ್ದರು.