ದೇವನಹಳ್ಳಿ: ತಹಸೀಲ್ದಾರ್ ಆಗಿ ಎಂ.ಅನಿಲ್ ಅಧಿಕಾರ ಸ್ವೀಕಾರ ಮಾಡಿದರು.
ಎಚ್. ಬಾಲಕೃಷ್ಣ ಅವರು ಜು.31ರಂದು ನಿವೃತ್ತರಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಎಂ.ಅನಿಲ್ ಅವರನ್ನು ಸರ್ಕಾರ ದೇವನಹಳ್ಳಿಗೆ ಬುಧವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಗುರುವಾರ ದೇವನಹಳ್ಳಿಗೆ ಆಗಮಿಸಿದ ಅನಿಲ್‌ಕುಮಾರ್ ಶ್ರೀವೇಣುಗೋಪಾಲಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಂಡರು. ಗ್ರೇಡ್ 2 ತಹಸೀಲ್ದಾರ್ ಜಯಕುಮಾರ್ ಮತ್ತು ಸಿಬ್ಬಂದಿ ಹೂಗುಚ್ಚ ನೀಡಿ ಸ್ವಾಗತಿಸಿದರು.