ಭಾವಗೀತೆ, ಚಲನಚಿತ್ರಗೀತೆ ಸ್ಪರ್ಧಾ ವಿಜೇತರು

IMG_20200115_0001
Published on

ಮೈಸೂರು: ಬೋಗಾದಿ ನ್ಯಾಯಾಂಗ ಬಡಾವಣೆಯ ಏಕತಾ ಮೈಸೂರು ಸಾಂಸ್ಕೃತಿಕ ವೇದಿಕೆ ಮತ್ತು ಹಳೇ ಬೇರು ಹೊಸ ಚಿಗುರು ಫೌಂಡೇಷನ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭಾವಗೀತೆ, ಚಲನಚಿತ್ರಗೀತೆ ಸ್ಪರ್ಧೆಯಲ್ಲಿ ಕೆಳಕಂಡವರು ವಿಜೇತರಾಗಿದ್ದಾರೆ.

ಭಾವಗೀತೆ: ಡಾ.ಸುಷ್ಮಾ ಆನಂದ್ (ಪ್ರಥಮ), ಶಶಾಂಕ್ (ದ್ವಿತೀಯ), ಜಯಲಕ್ಷ್ಮೀ ನಾಯ್ಡು (ತೃತೀಯ).
ಚಲನಚಿತ್ರಗೀತೆ: ಪವನ್‌ಕುಮಾರ್ (ಪ್ರಥಮ), ಪ್ರಕಾಶ್ (ದ್ವಿತೀಯ), ವಿದ್ಯಾ ಸತೀಶ (ತೃತೀಯ).
ಗಾಯಕ ಕೃಷ್ಣಮೂರ್ತಿ, ಸಂಗೀತ ಶಿಕ್ಷಕರಾದ ಸುಷ್ಮಾ, ಅಪೂರ್ವ, ಚಿತ್ರನಟ ಮಂಡ್ಯ ಆನಂದ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಫೌಂಡೇಷನ್ ಅಧ್ಯಕ್ಷ ಹಾಗೂ ವಿ.ಅನಿಲ್‌ರಾಜ್, ವೇದಿಕೆ ಪ್ರಧಾನ ಕಾರ್ಯದರ್ಶಿ ಎ.ಕೆ.ಮುರುಳಿಧರ, ಲಕ್ಷ್ಮೀಶ ಇತರರಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net