ಮೈಸೂರು: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಕೆನ್ನಾಳು ಗ್ರಾಮದ 12 ವರ್ಷದ ಬಾಲಕಿ ಲಿಂಪೋಬ್ಲಾಸ್ಟಿಕ್ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಪಾಲಕರು ಚಿಕಿತ್ಸೆಗೆ ಆರ್ಥಿಕ ನೆರವು ಕೋರಿದ್ದಾರೆ.
ಬಾಲಕಿಗೆ ಅಸ್ಥಿಮಜ್ಜೆ ಕಸಿ ಶಸ್ತಚಿಕಿತ್ಸೆ ಅಗತ್ಯವಿದ್ದು, ಸುಮಾರು 40 ರಿಂದ 45 ಲಕ್ಷ ರೂ.ವೆಚ್ಚವಾಗಲಿದೆ. ಇದನ್ನು ಭರಿಸುವುದು ಈ ಬಡಕುಟುಂಬಕ್ಕೆ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ನೆರವು ನೀಡುವಂತೆ ಮೈಸೂರು ಗೋಲ್ಡನ್ ಸಿಟಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಸ್. ಪ್ರಮೀಳಾ ಬುಧವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಮಗುವಿನ ತಂದೆ ಇ.ಸುಂದರೇಶ್, ತಾಯಿ ಕೆ.ಎಸ್.ಭಾವನಾ ಕೂಲಿ ಕೆಲಸ ಮಾಡುತ್ತಿದ್ದಾರೆ. ಈಗ ಚುನಾವಣಾ ನೀತಿ ಸಂಹಿತೆ ಕಾರಣ ಸರ್ಕಾರ, ಸಚಿವರು, ಶಾಸಕರ ಮಟ್ಟದಲ್ಲಿ ನೆರವು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಕ್ಲಬ್ ಉದ್ಯಮಿಗಳು, ಉಳ್ಳವರು ಹಾಗೂ ಇನ್ನಿತರರು ನೆರವು ನೀಡಬೇಕು ಎಂದು ಮನವಿ ಮಾಡಿದರು.
ದಾನಿಗಳು ಕೆ.ಎಸ್.ಭಾವನಾ (ಮಗುವಿನ ತಾಯಿ), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ದರಸನಗುಪ್ಪೆ ಶಾಖೆ, ಖಾತೆ ಸಂಖ್ಯೆ 39333115926, ಐಎಫ್‌ಎಸ್‌ಸಿ ಕೋಡ್ ಎಸ್‌ಬಿಐಎನ್0041018ಕ್ಕೆ ನೆರವು ನೀಡುವುದು. ಮಾಹಿತಿಗೆ ಮೊ.9901265043 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಕ್ಲಬ್ ಅಧ್ಯಕ್ಷ ಟಿ.ಸುರೇಶ್ ಗೋಲ್ಡ್, ಕರ್ನಾಟಕ ಸೇವಾ ಪಡೆ ಅಧ್ಯಕ್ಷ ತೇಜಸ್ ಲೋಕೇಶ್‌ಗೌಡ, ಲಯನ್ಸ್ ಸಂಸ್ಥೆಯ ಮಂಜುನಾಥ್, ಮಗುವಿನ ತಾಯಿ ಭಾವನಾ ಇದ್ದರು.