

ಬೆಳಗಾವಿ: ತಾಲೂಕಿನ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಿಯನ್ನು ಕೂರಿಸುವ ಡೊಳ್ಳಾರಗಿ(ದೇವಿ ಕುಳಿತುಕೊಳ್ಳುವ ಆಸನ)ಯನ್ನು ಕುಂಭ ಮೇಳ ಹಾಗೂ ವಾದ್ಯ ಮೇಳದೊಂದಿಗೆ ಸಡಗರ-ಸಂಭ್ರಮದಿAದ ಮೆರವಣಿಗೆ ಮೂಲಕ ತರಲಾಯಿತು.
ಸುಳೇಭಾವಿ ಗ್ರಾಮದ ಮುರಾರಿ ಮನೆತನದವರು ಮಾಡಿಸಿರುವ ಎರಡು ಡೊಳ್ಳಾರಗಿಗಳನ್ನು ಮೆರವಣಿಗೆ ಮೂಲಕ ತಂದು ದೇವಸ್ಥಾನದಲ್ಲಿ ಪೂಜೆ ಮಾಡಿಸಲಾಯಿತು. ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ತಯಾರಿಸಿರುವ ಈ ಡೊಳ್ಳಾರಗಿಯನ್ನು ಗ್ರಾಮಕ್ಕೆ ತಂದು ಮೆರವಣಿಗೆಗೆ ಮಹಿಳೆಯರ ಕುಂಭ ಮೇಳ, ವಾದ್ಯಮೇಳಗಳು ಮೆರುಗು ತಂದವು.
ಗ್ರಾಮದ ಬಜಾರ ಗಲ್ಲಿಯಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಜತೆಗೆ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿಯೂ ಡೊಳ್ಳಾರಗಿಯ ಪೂಜಾ ವಿಧಿ ವಿಧಾನಗಳು ನಡೆದವು. ಮುಂದಿನ ವರ್ಷ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಈ ಡೊಳ್ಳಾರಗಿಯನ್ನು ಮುರಾರಿ ಮನೆತನದವರು ತಯಾರಿಸಿ ಗ್ರಾಮಕ್ಕೆ ತಂದರು.
ಗ್ರಾಮದ ಮುಖಂಡರಾದ ದೇವಪ್ಪ ಮುರಾರಿ, ಭೈರು ಮುರಾರಿ, ಲಕ್ಷö್ಮಣ ಮುರಾರಿ, ಬಾಳೇಶಿ ಮುರಾರಿ, ಬಸವಣ್ಣಿ ಮುರಾರಿ, ದ್ಯಾಮಣ್ಣ ಮುರಾರಿ, ಮಲ್ಲೇಶಿ ಮುರಾರಿ, ಪುಂಡಲೀಕ ಮುರಾರಿ, ಯಲ್ಲೇಶ ಮುರಾರಿ ಸೇರಿದಂತೆ ಇತರರು ಇದ್ದರು.
ಫೋಟೊ: