ಎಂಟಿಬಿ ನಾಗರಾಜ್​ ಮನೆಯಲ್ಲಿ 'ಐಷಾರಾಮಿ' ಆಯುಧ ಪೂಜೆ!

3d3b667d-3944-42f6-9107-4e59bb4ffc0d
Published on

ಬೆಂಗಳೂರು: ದಸರಾ ದರ್ಬಾರ್​ ಎಂದೆನಿಸುವಂಥ ಕಾರ್​​ಬಾರ್ ರೀತಿಯ ಅದ್ದೂರಿ ಆಯುಧ ಪೂಜೆಗೆ ಇಲ್ಲೊಂದು ಬಂಗಲೆಯಂಥ ಮನೆ ಸಾಕ್ಷಿಯಾಗಿದೆ. ಅಂದಹಾಗೆ ಇಂಥ ಅದ್ದೂರಿ ಆಯುಧ ಪೂಜೆ ನಡೆದಿರುವುದು ಮಾಜಿ ಶಾಸಕ ಎಂ.ಟಿ.ಬಿ. ನಾಗರಾಜ್ ಅವರ ಮನೆಯಲ್ಲಿ.

ಮಹದೇವಪುರ ಬಳಿ ಹತ್ತಿರದ ಗರುಡಾಚಾರ್​ ಪಾಳ್ಯದ ಆಶ್ರಯ ಬಡಾವಣೆಯಲ್ಲಿರುವ ಮನೆಯಲ್ಲಿ ಎಂ.ಟಿ.ಬಿ. ನಾಗರಾಜ್ ಅವರು, ತಮ್ಮಲ್ಲಿರುವ ಹತ್ತಾರು ಐಷಾರಾಮಿ ಕಾರುಗಳನ್ನು ಸಾಲಾಗಿ ನಿಲ್ಲಿಸಿ ಆಯುಧ ಪೂಜೆ ಮಾಡಿದ್ದಾರೆ.

ರೋಲ್ಸ್​ ರಾಯ್ಸ್​, ರೇಂಜ್​ ರೋವರ್​, ಮರ್ಸಿಡೆಸ್ ಬೆಂಜ್​, ಟೊಯೊಟ ಫಾರ್ಚೂನರ್​, ಇನ್ನೋವಾ ಮುಂತಾದ ಲಕ್ಸುರಿ ಕಾರುಗಳು, ಅತ್ಯಾಧುನಿಕ ಪಿಸ್ತೂಲ್​ ಮುಂತಾದವನ್ನೆಲ್ಲ ಇರಿಸಿ, ಕುಟುಂಬಸ್ಥರೊಂದಿಗೆ ಆಯುಧ ಪೂಜೆ ಆಚರಿಸಿದ್ದಾರೆ ಎಂಟಿಬಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net