ತಾಂಡಾಗಳಲ್ಲಿ ಆಮಿಷವೊಡ್ಡಿ ಮತಾಂತರ

6 ಎಸ್ಕೆಪಿ 2t
ಮತಾಂತರ ವಿರೋಧಿಸಿ ಬಂಜಾರ ಸಮಾಜದ ಪ್ರಮುಖರು ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದರು. ಸೈನಾ ಭಗತ್ ಮಹಾರಾಜ್, ಪರಮೇಶ್ವರ ನಾಯ್ಕ, ಸುರೇಶ್ ನಾಯ್ಕ, ರಮೇಶ್ ನಾಯ್ಕ ಇತರರಿದ್ದರು.
Published on

ಶಿಕಾರಿಪುರ: ತಾಲೂಕಿನ ಬಂಜಾರ ಸಮಾಜದ ತಾಂಡಾಗಳಲ್ಲಿ ಕ್ರಿಶ್ಚಿಯನ್ ಮಿಷಿನರಿಗಳಿಂದ ಮತಾಂತರ ನಡೆಯುತ್ತಿದ್ದು ಸರ್ಕಾರ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಮಾಜದ ಗುರುಗಳಾದ ಸೈನಾ ಭಗತ್ ಮಹಾರಾಜ್ ಅವರ ಉಪಸ್ಥಿತಿಯಲ್ಲಿ ಪ್ರಮುಖರು ಶನಿವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಮುಖಂಡ ಲೋಹಿತ್ ನಾಯ್ಕ ಮಾತನಾಡಿ, ಬಂಜಾರ ಸಮಾಜ ತನ್ನದೇ ಆದಂತಹ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಕೂಡಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಸಮಾಜದ ತಾಂಡಾಗಳಲ್ಲಿ ಸದ್ದಿಲ್ಲದೇ ನಿರಂತರವಾಗಿ ಮತಾಂತರ ನಡೆಯುತ್ತಿದೆ. ಆಮಿಷಗಳಿಂದ ಜನರನ್ನು ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಮುಖರಾದ ಪರಮೇಶ್ವರ ನಾಯ್ಕ, ಸುರೇಶ್ ನಾಯ್ಕ, ರಮೇಶ್ ನಾಯ್ಕ, ಜಯಾ ನಾಯ್ಕ, ವಿಜಯಲಕ್ಷ್ಮೀ ಮಂಜಾನಾಯ್ಕ, ರಮೇಶ್ ನಾಯ್ಕ ಸೇರಿದಂತೆ ತಾಲೂಕಿನ ಎಲ್ಲ ತಾಂಡಾಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net