

ಆನೇಕಲ್: ತಾಲೂಕಿನಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ, ಚಡ್ಡಿಗ್ಯಾಂಗ್ ಆಯ್ತು, ಮಂಕಿ ಕ್ಯಾಪ್ ಗ್ಯಾಂಗ್ ಆಯ್ತು, ಈಗ ಲುಂಗಿ ಗ್ಯಾಂಗ್ ತಲೆ ಎತ್ತಿದ್ದು, ರಾತ್ರಿ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ಜನರ ನಿದ್ದೆ ಕೆಡಿಸುತ್ತಿದೆ.
ಬೆಳಗ್ಗಿನ ಜಾವ ಎರಡು ಅಥವಾ ಮೂರು ಗಂಟೆ ಸುಮಾರಿಗೆ ಲುಂಗಿ ಗ್ಯಾಂಗ್ ರಸ್ತೆಗೆ ಇಳಿಯುತ್ತಿದೆ. ಇತ್ತೀಚೆಗೆ ಬೆಸ್ತಮಾನಹಳ್ಳಿಯಲ್ಲೂ ಎರಡು ದಿನಗಳ ಹಿಂದೆ ಮನೆಗೆ ನುಗ್ಗಲು ಪ್ರಯತ್ನಿಸಿದ ಲುಂಗಿ ಗ್ಯಾಂಗ್ ಸಿಸಿ ಕ್ಯಾಮರಾದ ಸೈರನ್ ಸೌಂಡ್ ಮಾಡಿದ ತಕ್ಷಣವೇ ಅಲ್ಲಿಂದ ಮೂರು ಮಂದಿಯಿದ್ದ ಗ್ಯಾಂಗ್ ಪರಾರಿಯಾಗಿದೆ. ಬೆಸ್ತಮಾನಹಳ್ಳಿ ಮಾತ್ರವಲ್ಲದೆ ಮಾಯಸಂದ್ರ, ಶೆಟ್ಟಿಹಳ್ಳಿ ಸಮೀಪ ಸಹ ಬೈಕ್‌ನಲ್ಲಿ ಬಂದ ಕಳ್ಳರು ಅವರ ಬೈಕ್ ಇಲ್ಲೇ ಬಿಟ್ಟು ಆಕ್ಟಿವಾ ಗಾಡಿ ಕದ್ದು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸರಿಯಾಗಿದೆ. ಇನ್ನು ಒಂಟಿ ಮನೆಗಳೇ ಈ ಖದೀಮರ ಟಾರ್ಗೆಟ್ ಆಗಿದ್ದು, ರಾತ್ರಿ ವೇಳೆಯಲ್ಲಿ ಜನಸಾಮಾನ್ಯರು ಹೊರಗೆ ಓಡಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.