ಮುಳಿಂಜ ಶಾಲೆಗೆ ಊಟದ ತಟ್ಟೆ ಕೊಡುಗೆ

New Project (6)
Published on

ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನ ಭೋಜನಕ್ಕಾಗಿ ಶಾಲೆಗೆ ನೇಮಕಾತಿಗೊಂಡ ಶಿಕ್ಷಕಿಯರಾದ ಐಶ್ವರ್ಯಾ ಮತ್ತು ಅಯಿಷತ್ ಸೈನಾಜ್ ಸ್ಟೀಲ್ ಊಟದ ತಟ್ಟೆಗಳನ್ನು ಕೊಡುಗೆಯಾಗಿ ಶಾಲಾ ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರಿಗೆ ಹಸ್ತಾಂತರಿಸಿದರು.

ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ರಹಮಾನ್, ಮಂಗಲ್ಪಾಡಿ ಪಂಚಾಯಿತಿ ಅಧ್ಯಕ್ಷೆ ಬೀನಾ ನೌಫಲ್, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್, ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಶರೀಫ್, ಮಜೀದ್, ಎಸ್.ಡಿ.ಸಿ. ಉಪಾಧ್ಯಕ್ಷ ಇಸ್ಮಾಯಿಲ್, ಎಸ್.ಎಂ.ಸಿ. ಸದಸ್ಯ ಫಾರೂಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net