ಆಟೋಗೆ ಲಗ್ಗೇಜ್ ವಾಹನ ಡಿಕ್ಕಿ, ಪಿಯು ವಿದ್ಯಾರ್ಥಿನಿ ಸಾವು

East traffic station
ಪೂರ್ವ ಸಂಚಾರ ಪೊಲೀಸ್ ಠಾಣೆ
Published on

ಶಿವಮೊಗ್ಗ: ನಗರದ ಪೇಸ್ ಕಾಲೇಜಿನ ಎದುರು ಭಾನುವಾರ ಮಧ್ಯಾಹ್ನ ಆಟೋಗೆ ಲಗ್ಗೇಜ್ ವಾಹನ ಡಿಕ್ಕಿಯಾಗಿ ಚಿಕ್ಕಮಗಳೂರು ಮೂಲದ ದ್ವಿತೀಯ ಪಿಯು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಅಜ್ಜಂಪುರದ ಗಾನ್ಹವಿ(17) ಮೃತ ದುರ್ದೈವಿ. ಗಾನ್ಹವಿ ಶಿವಮೊಗ್ಗ ಪೇಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಳು. ಭಾನುವಾರ ರಜೆ ಇದ್ದ ಕಾರಣ ತಾಯಿ ಮತ್ತು ಅಜ್ಜಿಯೊಂದಿಗೆ ಬೆಳಗ್ಗೆ ಶಿವಮೊಗ್ಗ ಸಿಟಿಗೆ ಬಂದಿದ್ದರು. ಮಧ್ಯಾಹ್ನದವರೆಗೆ ಸುತ್ತಾಡಿ ಆನಂತರ ಆಟೋದಲ್ಲಿ ಕಾಲೇಜಿನ ಹಾಸ್ಟೆಲ್‌ಗೆ ತೆರಳುತ್ತಿದ್ದಾಗ ಶಿವಮೊಗ್ಗದಿಂದ ಹೊನ್ನಾಳಿಯತ್ತ ಹೊರಟಿದ್ದ 407 ಲಗ್ಗೇಜ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾನ್ಹವಿ ಮೃತಪಟ್ಟಿದ್ದು ಆಕೆಯ ತಾಯಿ, ಅಜ್ಜಿ ಮತ್ತು ಆಟೋ ಚಾಲಕ ಗಾಯಗೊಂಡಿದ್ದಾರೆ. ಲಗ್ಗೇಜ್ ವಾಹನವನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net