ಚನ್ನವ್ವ ಕಳ್ಳಿಹಾಳಗೆ ಒಲಿದ ಅದೃಷ್ಟ

SURANAGI
Published on

ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಚೀಟಿ ಎತ್ತುವ ಮೂಲಕ ಶುಕ್ರವಾರ ಆಯ್ಕೆ ಮಾಡಲಾಯಿತು.

20 ಸದಸ್ಯ ಸ್ಥಾನಗಳನ್ನು ಹೊಂದಿರುವ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಶಂಕ್ರಪ್ಪ ಶೀರನಹಳ್ಳಿ ಮತ್ತು ಚನ್ನವ್ವ ಕಳ್ಳಿಹಾಳ ನಾಮಪತ್ರ ಸಲ್ಲಿಸಿದ್ದರು. ಇಬ್ಬರೂ ತಲಾ 10 ಮತಗಳನ್ನು ಪಡೆದರು. ನಂತರ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಅದೃಷ್ಟವು ಚನ್ನವ್ವ ಕಳ್ಳಿಹಾಳ ಅವರ ಪರವಾಯಿತು.

ಉಪಾಧ್ಯಕ್ಷೆಯಾಗಿ ಯಲ್ಲವ್ವ ಫಕೀರಪ್ಪ ಚಕ್ರಸಾಲಿ ಆಯ್ಕೆಯಾದರು. ಚಂದ್ರಶೇಖರ ನರಸಮ್ಮನವರ ಚುನಾವಣಾಧಿಕಾರಿಯಾಗಿದ್ದರು.

ಗ್ರಾಪಂ ಸದಸ್ಯರಾದ ದೀಪಾ ಕಾಶಿಕೋವಿ, ಪ್ರಕಾಶ ಶೀರನಹಳ್ಳಿ, ಪ್ರವೀಣ ಸೂರಣಗಿ, ಶಾರದಾ ಲಮಾಣಿ, ಹನಮಂತಪ್ಪ ತಳಗೇರಿ, ಸುಮಂಗಲಾ ಮೇಲ್ಮರಿ, ಲಕ್ಷ್ಮವ್ವ ಲಮಾಣಿ, ಮಲಕಾಜಪ್ಪ ನಾಗಣ್ಣವರ, ಪೀರಸಾಬ್ ರಿತ್ತಿ, ಲಕ್ಷ್ಮವ್ವ ಹಂಗನಕಟ್ಟಿ, ಹೆಗ್ಗಪ್ಪ ಹರಿಜನ, ನೀಲಪ್ಪ ದೊಡ್ಡಗಣ್ಣವರ, ಚಂದ್ರಶೇಖರ ಮೂಲಿಮನಿ, ಸುಶೀಲಾ ಲಮಾಣಿ, ಪರಮೇಶ ಲಮಾಣಿ, ತುಕ್ಕಪ್ಪ ಕಾರಬಾರಿ, ಚಂದಪ್ಪ ಪೂಜಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net