ಗ್ರಾಮ ಶಿಲ್ಪಿ-ಮೇಳ 17ರಿಂದ

Published on

ಹುಬ್ಬಳ್ಳಿ: ನಗರದ ಹೆಬಸೂರ ಭವನದಲ್ಲಿ ಜು.17ರಿಂದ 23ರವರೆಗೆ ಐಎಂಎಸ್ ಫೌಂಡೇಷನ್ ಸಹಯೋಗದೊಂದಿಗೆ ಗ್ರಾಮ ಶಿಲ್ಪಿ-ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಲಘು ಉದ್ಯೋಗ ಭಾರತೀ ಹುಬ್ಬಳ್ಳಿ-ಧಾರವಾಡ ಅಧ್ಯಕ್ಷ ರಾಜು ಪಾಟೀಲ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 17ರಂದು ಸಂಜೆ 5 ಗಂಟೆಗೆ ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸುವರು. ಹಸ್ತಶಿಲ್ಪ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ, ಇತರರು ಪಾಲ್ಗೊಳ್ಳುವರು ಎಂದರು.

10 ರಾಜ್ಯಗಳಿಂದ ಆಗಮಿಸುವ 40ಕ್ಕೂ ಹೆಚ್ಚು ಶಿಲ್ಪಿಗಳು ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಹಸ್ತ ಕಲೆ, ಲೋಹ, ಹತ್ತಿ ಬಟ್ಟೆ, ಮರ, ಮಣ್ಣು ಹಾಗೂ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಉತ್ಪನ್ನಗಳನ್ನು ವೀಕ್ಷಿಸಬಹುದಾಗಿದೆ. ಮೇಳವು, ಕಲಾವಿದರು ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವೇದಿಕೆಯಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದ್ದು ನಿತ್ಯ ಬೆಳಗ್ಗೆ 10.30ರಿಂದ ರಾತ್ರಿ 9 ಗಂಟೆಯವರೆಗೆ ಭೇಟಿ ನೀಡಬಹುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net