ಮೈಸೂರು: ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನಿಂದ ಬೀದಿಬದಿ ವ್ಯಾಪಾರಿಗಳಿಗೆ ಬಿಸಿಲು ರಕ್ಷಣೆಗಾಗಿ ಛತ್ರಿಗಳನ್ನು ನೀಡಲಾಯಿತು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಲಯನ್ಸ್ ಜಿಲ್ಲೆ -255’ರ ಲೋಗೊ ಬಿಡುಗಡೆ ಕಾರ್ಯಕ್ರಮದಲ್ಲಿ ಛತ್ರಿ ವಿತರಿಸಲಾಯಿತು.
ಸಂಸ್ಥೆಯ ಜಿಲ್ಲಾ ಗವರ್ನರ್ ಎಂ.ಎನ್.ಬಾಲಕೃಷ್ಣ ರಾಜು ಮಾತನಾಡಿ, ಅಲಯನ್ಸ್ ಜಿಲ್ಲೆ -255’ರಲ್ಲಿ ಈಗ 40 ಕ್ಲಬ್ ಶಾಖೆಗಳಿದ್ದು, ಮೇ 12 ರಂದು ನಗರದಲ್ಲಿ ಜಿಲ್ಲಾ ಕ್ಯಾಬಿನೆಟ್ ಪರಿಚಯ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಜನರ ಅಗತ್ಯಗಳಿಗೆ ಕೆಲಸ ಮಾಡಲು ವಿವಿಧ ಯೋಜನೆಗಳನ್ನೂ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆ 255ರ ಉಪ ಗೌವರ್ನರ್‌ಗಳಾದ ವಿ.ಮಹಾಬಲ ಭೈರಿ, ಎಂ.ಎಸ್.ಸಂತೋಷ್ ಕುಮಾರ್, ಎಸ್.ವೆಂಕಟೇಶ್, ಕಾರ್ಯದರ್ಶಿ ಎನ್.ಗಂಗಾಧರಪ್ಪ, ಖಜಾಂಚಿ ಕೃಷ್ಣೋಜಿ ರಾವ್, ಮುಖಂಡ ಎನ್.ಬೆಟ್ಟೇಗೌಡ ಇದ್ದರು.