

ಮಂಜುನಾಥ ಅಂಗಡಿ ಧಾರವಾಡ
ಕಳೆದ ವರ್ಷ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗ ಜಾನುವಾರುಗಳ ಸಾವು- ನೋವಿಗೆ ಕಾರಣವಾಗಿತ್ತು. 2022ರ ಅಂತ್ಯಕ್ಕೆ ಬಂದೆರಗಿದ ಬಾಧೆಯಿಂದ ಜಿಲ್ಲೆಯಲ್ಲಿ ಸಾವಿರಾರು ಜಾನುವಾರುಗಳು ಮೃತಪಟ್ಟವು. ಮೃತ ಜಾನುವಾರುಗಳಿಗೆ ಸರ್ಕಾರ ಪರಿಹಾರ ೋಷಿಸಿ ಅನುದಾನವನ್ನೂ ಬಿಡುಗಡೆ ಮಾಡಿತ್ತು. ಉಳಿದ ಲಾನುಭವಿ ರೈತರಿಗೆ ಪರಿಹಾರಧನವನ್ನು ಮುಂದುವರಿಸುವಂತೆ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲೇ ೋಷಿಸಿದೆ.
ರೈತರ ಒಡನಾಡಿಗಳಾದ ಜಾನುವಾರುಗಳಲ್ಲಿ ದಶಕಗಳ ನಂತರ ಚರ್ಮಗಂಟು ರೋಗ ಕಾಣಿಸಿಕೊಂಡಿತ್ತು. ಜಿಲ್ಲೆಯಲ್ಲಿ 2022ರ ಆ. 27ರಿಂದ 2023ರ ಮಾ. 31ರವರೆಗೆ 133 ಕರುಗಳು, 492 ಆಕಳುಗಳು ಹಾಗೂ 413 ಎತ್ತುಗಳು ಸೇರಿ 1,038 ಜಾನುವಾರುಗಳು ಮೃತಪಟ್ಟಿದ್ದವು. ರೈತರ ನೋವಿಗೆ ಸ್ಪಂದಿಸಿದ್ದ ಬಿಜೆಪಿ ಸರ್ಕಾರ, ಮೃತ ಜಾನುವಾರುಗಳಿಗೆ ಪರಿಹಾರಧನ ೋಷಿಸಿತ್ತು. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಪರಿಹಾರಧನ ಜಮೆ ಮಾಡಲಾಗಿತ್ತು.
ಕರುವಿಗೆ 5,000 ರೂ., ಆಕಳಿಗೆ 20,000 ರೂ. ಹಾಗೂ ಎತ್ತಿಗೆ 30,000 ರೂ. ಪರಿಹಾರ ೋಷಿಸಲಾಗಿತ್ತು. ಬೇರೆ ರೋಗಗಳಿಂದ ಬಳಲಿ ಮೃತ ಜಾನುವಾರುಗಳು ಹಾಗೂ ವಯೋಸಹಜ ಸಾವಿಗೂ ಪರಿಹಾರ ಪಡೆದುಕೊಳ್ಳುವುದನ್ನು ತಡೆಯಲು ಇಲಾಖೆ ಸ್ಥಳ ಮಜಹರು ಪ್ರಮಾಣೀಕರಣಕ್ಕೆ ಸೂಚಿಸಿತ್ತು. ಜಾನುವಾರು ಸಾವಿನ ವರದಿಯಾಗುತ್ತಿದ್ದಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸ್ಥಳೀಯ ವೈದ್ಯರು ಸ್ಥಳಕ್ಕೆ ತೆರಳಿ ಪ್ರಾಥಮಿಕ ವರದಿ ಮಾಡಿಕೊಂಡಿದ್ದರು. ಸ್ಥಳದಲ್ಲಿ ಜಿಪಿಎಸ್ ೆಟೊ ತೆಗೆದು ರಕ್ತದ ಮಾದರಿ ಪಡೆಯುತ್ತಿದ್ದರು. ಜಾನುವಾರು ಚರ್ಮಗಂಟು ರೋಗದಿಂದ ಮೃತಪಟ್ಟಿರುವುದನ್ನು ಪ್ರಮಾಣೀಕರಿಸಲು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಚರ್ಮಗಂಟು ರೋಗ ದೃಢಪಟ್ಟರೆ ಅವುಗಳ ಮಾಲೀಕರ ಖಾತೆಗೆ ಹಣ ಜಮೆಗೆ ಶಿಾರಸು ಮಾಡಿದ್ದರು. ಬಹುತೇಕ ರೈತರ ಖಾತೆಗಳಿಗೆ ಪರಿಹಾರಧನ ಜಮೆಯಾಗಿದ್ದು, ಕೊಂಚ ಆರ್ಥಿಕ ಸಹಾಯವಾಗಿತ್ತು.
* ಬಾಕಿ ವಿವರ: ಜಿಲ್ಲೆಯಲ್ಲಿ 4 ಕರುಗಳ ಮರಣಕ್ಕೆ 20,000 ರೂ., 50 ಆಕಳುಗಳಿಗೆ 10,00,000 ರೂ., 48 ಎತ್ತುಗಳಿಗೆ 16,50,000 ಸೇರಿ 108 ಜಾನುವಾರುಗಳಿಗೆ 26,70,000 ರೂ. ಅನುದಾನ ಬರುವುದು ಬಾಕಿ ಇದೆ. ಸರ್ಕಾರ ಬಜೆಟ್‌ನಲ್ಲಿ ೋಷಿಸಿದಂತೆ ಹಣ ಬಿಡುಗಡೆಯಾದ ಕೂಡಲೇ ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗುವುದು ಎನ್ನುತ್ತಾರೆ ಪಶುಪಾಲನಾ ಇಲಾಖೆ ಅಧಿಕಾರಿಗಳು.
* ಕಳೆದ ವರ್ಷ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗ ಬಾಧೆಯಿಂದ ಮೃತ ಜಾನುವಾರುಗಳಿಗೆ ಪರಿಹಾರಧನ ಮುಂದುವರಿಸುವಂತೆ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ೋಷಿಸಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ರೋಗಬಾಧೆ ಸಂಪೂರ್ಣ ಕ್ಷೀಣಿಸಿದೆ. ರೋಗಬಾಧೆ ಹತೋಟಿಗಾಗಿ ಜಾನುವಾರುಗಳಿಗೆ ಶೇ. 100 ಲಸಿಕಾಕರಣ ಮಾಡಲಾಗಿದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಕಾಲು ಮತ್ತು ಬಾಯಿ ಬೇನೆಗೂ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ.
- ಡಾ. ರವಿ ಸಾಲಿಗೌಡರ, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ