ಗೋಕರ್ಣದಲ್ಲಿ ಐದು ಸಿಲಿಂಡರ್ ಗಳು ಸ್ಫೋಟ- ಹೊತ್ತಿ ಉರಿದ ಮನೆ

IMG-20200101-WA0005.jpg
Published on

ಕಾರವಾರ: ಮನೆಯಲ್ಲಿ ಶೇಖರಿಸಿದ್ದ ಸಿಲಿಂಡರ್ ಗಳು ಸ್ಫೋಟಗೊಂಡು ಮನೆ ಹೊತ್ತಿ ಉರಿದ ಘಟನೆ ಮಂಗಳವಾರ ರಾತ್ರಿ ಗೋಕರ್ಣ ಸಮೀಪ ನಡೆದಿದೆ.

ಗೋಕರ್ಣದ ತಾರಮಕ್ಕಿ ಗ್ರಾಮದ ನಾಗರಾಜ ಶಾನು ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಶೇಖರಿಸಿಟ್ಟಿದ್ದ 7 ಸಿಲಿಂಡರ್ ಗಳ ಪೈಕಿ 5 ಸಿಲಿಂಡರ್ ಸ್ಫೋಟಗೊಂಡಿದೆ. ಇದರ ತೀವ್ರತೆಗೆ ಮನೆ ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ‌. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net