ಬ್ಯಾಂಕ್ ಮೇಲೆ ನಿಷ್ಠೆ, ಪ್ರೀತಿ ಹೆಚ್ಚಾಗಬೇಕು

20kpp1
Published on

ಕೊಪ್ಪ: ಷೇರುದಾರರಿಗೆ, ಸಾರ್ವಜನಿಕರಿಗೆ ಬ್ಯಾಂಕ್‌ನ ಮೇಲೆ ನಿಷ್ಠೆ, ಪ್ರೀತಿ ಹೆಚ್ಚಾಬಗೇಕು. ಬ್ಯಾಂಕ್ ನಮ್ಮದು ಎಂದು ವಾಹಿವಾಟು ನಡೆಸಬೇಕು ಆಗ ಬ್ಯಾಂಕ್ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಪಿಕಾರ್ಡ್ ಬ್ಯಾಂಕ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಎಸ್ ಇನೇಶ್‌ಗೆ ಶುಕ್ರವಾರ ಅಭಿನಂದನೆ ಸಲ್ಲಿಸಿ ಮಾತನಾಡಿ, ನಾಲ್ಕೈದು ವರ್ಷದ ಹಿಂದೆ ಈ ಬ್ಯಾಂಕ್‌ನ ಸ್ಥಿತಿ ಹದಗೆಟ್ಟಿತ್ತು. ಅರ್ಥಿಕವಾಗಿ ಬ್ಯಾಂಕ್‌ಗೆ ಮತ್ತೆ ಜೀವ ಕೊಡುವ ವಾತಾವರಣ ಇರಲ್ಲಿಲ್ಲ. ಅಧ್ಯಕ್ಷರು ಹಾಗೂ ಹಿಂದಿನ ಆಡಳಿತ ಮಂಡಳಿ ಪ್ರಯತ್ನಯೊಂದಿಗೆ ಈಗ ಲಾಭದಲ್ಲಿದ್ದು, ಜಿಲ್ಲೆಯಲ್ಲಿ ಉತ್ತಮ ಬ್ಯಾಂಕ್ ಎಂದು ಹೆಸರು ಪಡೆದುಕೊಂಡಿದೆ ಎಂದರು.

ಶಾಸಕರ ಅನುದಾನ ಹಾಗೂ ಕೆಎಆರ್‌ಎಲ್‌ಡಿ ಅನುದಾನದಲ್ಲಿ 25 ಲಕ್ಷ ರೂ. ಅನುದಾನ ನೀಡಿ ಬ್ಯಾಂಕ್ ಅಭಿಬವೃದ್ಧಿ ಗೆ ಸಹಕಾರ ನೀಡಲಾಗಿದೆ. ಅಧ್ಯಕ್ಷರು ಹಾಗೂ ನಿರ್ದೇಶಕರು ಇಚ್ಛಾ ಶಕ್ತಿಯಿಂದ, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಉಪಾಧ್ಯಕ್ಷ ಶ್ರೀನಿವಾಸ್ ಕೂಡ್ರು, ನಿರ್ದೇಶಕರಾದ ಬಿ.ಎಸ್.ಸತೀಶ್‌ಅದ್ದಡ, ಪ್ರಫ್ಪುಲ್ ಚಂದ್ರ, ಸಾಯಿನಾಥ್, ಎಚ್.ಎಂ ಬಡಿಯಣ್ಣ, ಗೋಪಾಲ್‌ನಾಯ್ಕ, ನಾಗೇಶ್ ನುಗ್ಗಿ, ಬಡಿಯಣ್ಣ ಕೆ, ಲಕ್ಷ್ಮಮ್ಮ, ಧನ್ಯಾ, ಆದರ್ಶ್ ಹೆಚ್.ಇ, ಗಣೇಶ್ ಬಿ.ಆರ್, ಬ್ಯಾಂಕ್‌ನ ವ್ಯವಸ್ಥಾಪಕರಾದ ಬಿ.ಆರ್ ಲೀಲಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net