ಕೆಳ ಭಾಗದ ಜಮೀನುಗಳಿಗೆ ನೀರು ಹರಿಸಲು ನಂ.64-ಹಳೇಕೋಟೆ ಗ್ರಾಮಸ್ಥರ ಆಗ್ರಹ

240220 Siriguppa Farmers Appal to water Supply
Published on

ಸಿರಗುಪ್ಪ: ಬಾಗೇವಾಡಿ ಕಾಲುವೆಯ ಕೆಳ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನ ನಂ.64-ಹಳೇಕೋಟೆ ಗ್ರಾಮದ ರೈತರು ತಾಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ರೈತ ಶೇಖಣ್ಣ ಮಾತನಾಡಿ, ಬಾಗೇವಾಡಿ ಕಾಲುವೆ ಮೇಲ್ಭಾಗದ ರೈತರು ಅಕ್ರಮವಾಗಿ ನೀರು ಪಡೆಯುತ್ತಿದ್ದು, ಕಾಲುವೆ ಕೆಳ ಭಾಗದ ನಂ.64 ಹಳೆಕೋಟೆ, ಅರಳಿಗನೂರು, ಪೊಪ್ಪನಹಾಳು, ಬಗ್ಗೂರು ಸೇರಿ ವಿವಿಧ ಗ್ರಾಮಗಳ ಜಮೀನುಗಳಿಗೆ ಕಾಲುವೆ ನೀರು ಹರಿಯುತ್ತಿಲ್ಲ. ಬೇಸಿಗೆ ಆರಂಭದಲ್ಲೇ ಕುಡಿವ ನೀರಿಗೆ ಅಲೆದಾಡುವಂತಾಗಿದೆ. ಜನ ಜಾನುವಾರುಗೆ ತೀವ್ರ ತೊಂದರೆಯಾಗಿದೆ. ಇದೇ ಕಾಲುವೆ ವ್ಯಾಪ್ತಿಯ ಬಗ್ಗೂರು, ಪಪ್ಪನಾಳು, ಅರಳಿಗನೂರು, ಹಳೆಕೋಟೆ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಕಾಲುವೆಗೆ ನೀರು ಇಲ್ಲದಿದ್ದರೆ ಕೆರೆಗಳು ತುಂಬುವುದಾದರೂ ಹೇಗೆ? ಕೂಡಲೇ ಅಕ್ರಮ ನೀರಾವರಿಗೆ ಕಡಿವಾಣ ಹಾಕಿ ಕೆಳಭಾಗದ ಜಮೀನು, ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಗ್ರೇಡ್-2 ತಹಸೀಲ್ದಾರ್ ವಿಶ್ವನಾಥ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ರೈತರಾದ ವೈ.ಶಂಕ್ರಪ್ಪ, ಚನ್ನವೀರೇಶಗೌಡ, ಈರಣ್ಣ, ಶೇಕ್ಷಾವಲಿ, ವೆಂಕಟೇಶ, ಶಿವರೆಡ್ಡಿಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net