

ಶ್ರೀನಿವಾಸಪುರ: ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಸಂತೆ ಮೈದಾನ, ಕೋರ್ಟ್, ಕಟ್ಟೆ ಕೆಳಗಿನ ಪಾಳ್ಯ, 5ನೇ ವಾರ್ಡ್, ಎಪಿಎಂಸಿ ವಾರುಕಟ್ಟೆ ಸೇರಿ ಇತರೆ ಪಟ್ಟಣದ ತಗ್ಗು ಪ್ರದೇಶವು ಜಲಾವೃತವಾಗಿ ಮಳೆ ನೀರಿನಿಂದಾಗಿ ದಿಗ್ಬಂಧನವಾಗಿ ಜನ ಜೀವನ ಅಸ್ತವಸ್ತಗೊಂಡಿದೆ.
ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿನ ಆಹಾರ ಸಾಮಗ್ರಿಗಳು, ಸಿಲಿಂಡರ್, ಬಟ್ಟೆಗಳು, ಮಕ್ಕಳ ಪುಸ್ತಕಗಳು ಇತರೆ ದಾಖಲೆಗಳೆಲ್ಲ ನೀರಿನಲ್ಲಿ ಹಾಳಾಗುತ್ತಿದೆ ಎಂದು ನಿವಾಸಿಗಳು ಆಳಲು ತೋಡಿಕೊಂಡಿದ್ದಾರೆ.
ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಅಕ್ಕರೆಯಿಂದ ಬಂದು ಮತಹಾಕಿಸಿಕೊಳ್ಳುತ್ತಾರೆ, ಆದರೆ ನಾವು ಕಷ್ಟಕ್ಕೆ ಸಿಕ್ಕಿಕೊಂಡಾಗ ನಮ್ಮನ್ನು ನೋಡುವವರೇ ಇಲ್ಲದಂತಾಗಿದೆ. ಕಳೆದ 2 ದಿನಗಳಿಂದ ಕುಟುಂಬಕ್ಕೆ ಊಟ, ನಿದ್ದೆ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದು, ಕಷ್ಟ ಕೇಳುವವರೇ ಇಲ್ಲದಂತಾಗಿದೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪುರಸಭೆಯಿಂದ ತಾತ್ಕಾಲಿಕ ಊಟದ ವ್ಯವಸ್ಥೆ ವಾಡಲಾಗಿತ್ತು.
ಮೊಬೈಲ್ ಮೂಲಕ ಜಿಲ್ಲಾಧಿಕಾರಿಗಳಿಗೆ ವಸ್ತು ಸ್ಥಿತಿಯ ಬಗ್ಗೆ ವಾಹಿತಿ ನೀಡಲಾಗಿದೆ. ಸ್ಥಳೀಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಹಾಗೂ ಸದ್ಯದ ಸಮಸ್ಯೆಯ ಪರಿಹಾರ ವಾಡಲಾಗುವುದು.
ಜಿ.ಎನ್.ಸುಧೀಂದ್ರ
ತಹಸೀಲ್ದಾರ್