

ಹಾವೇರಿ: ಕಡಿಮೆ ಬಡ್ಡಿಗೆ ಸಾಲ ಕೊಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 15 ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸೇರಿ ನಾಲ್ವರ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮಹೇಶ ಕೋರಿ, ಆಂಧ್ರ ಪ್ರದೇಶದ ಕರ್ನೂಲನ ಬಾಲಾಜಿ, ಸುಬ್ಬಾರೆಡ್ಡಿ ಹಾಗೂ ಓರ್ವ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರ ವಿರುದ್ಧ ಇಲ್ಲಿಯ ಮಲ್ಲಿಕಾರ್ಜುನ ಚನ್ನಬಸಪ್ಪ ಹಾವೇರಿ ಎಂಬುವರು ದೂರು ದಾಖಲಿಸಿದ್ದಾರೆ.
ನಾನು ಶಾಲೆಯ ಕಟ್ಟಡ ನಿಮಿರ್ಸುವ ಸಲುವಾಗಿ ಬ್ಯಾಂಕ್ದಲ್ಲಿ ಸಾಲ ಪಡೆಯಲು ಹೋದಾಗ ಇಲ್ಲಿ ಬಡ್ಡಿದರ ಹೆಚ್ಚಾಗುತ್ತದೆ. ನಿಮಗೆ ಸಿಂಪಲ್ ಮಾಟಗೇಜ್ ಮೂಲಕ 20 ಕೋಟಿ ರೂ. ಸಾಲವನ್ನು ಕಡಿಮೆ ದರದಲ್ಲಿ ಕೊಡಿಸುವುದಾಗಿ ಹೇಳಿದ ಆರೋಪಿ ಮಹೇಶ ನನ್ನನ್ನು ಕರ್ನೂಲ್ಗೆ ಕರೆದುಕೊಂಡು ಹೋಗಿ ಬಾಲಾಜಿ, ಸುಬ್ಬಾರೆಡ್ಡಿ ಎಂಬುವರ ಪರಿಚಯ ಮಾಡಿಸಿ ಅವರಿಂದ 1 ಕೋಟಿ ರೂ. 50 ಪೈಸೆ ಬಡ್ಡಿಯಂತೆ 20 ಕೋಟಿ ರೂ. ಕೊಡಿಸುವುದಾಗಿ ಹೇಳಿದ್ದರು. ಅದಕ್ಕಾಗಿ ಕಾನೂನು ಸಲಹೆ ಪಡೆಯಲು 6.30 ಲಕ್ಷ ರೂ. ಮತ್ತು ಹಣ ಕಳುಹಿಸಲು ಕಮಿಷನ್ 8.10 ಲಕ್ಷ ರೂ. ಸೇರಿ ಒಟ್ಟು 15.40 ಲಕ್ಷ ರೂ. ಪಡೆದುಕೊಂಡು ಸಾಲ ಕೊಡದೆ ಹಾಗೂ ನನ್ನಿಂದ ಪಡೆದ ಹಣ ಕೂಡ ಕೊಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.