ಕಡಿಮೆ ಶುಲ್ಕದಲ್ಲಿ ಮಿದುಳಿನ ಕಾಯಿಲೆಗೆ ಶಸ್ತ್ರಚಿಕಿತ್ಸೆ

27 Jaggu 2
ಸುದ್ದಿಗೋಷ್ಠಿಯಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಡಾ. ಪ್ರಕಾಶ ಭರಮಗೌಡರ, ಡಾ.ಶಿವಶಂಕರ ಮರಜಕ್ಕೆ ಇದ್ದರು.
Published on

ಬೆಳಗಾವಿ: ಕೊಲ್ಲಾಪುರ ಜಿಲ್ಲೆಯ ಕನ್ಹೇರಿಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನ್ಯೂರೋ ಮೈಕ್ರೊಸ್ಕೋಪ್​ (ಜಾಯೀಸ್​ ಪೆಂಟೇರೊ 800ಎಸ್​) ಯಂತ್ರ ಬಳಸಿ, ಅತಿ ಕಡಿಮೆ ಶುಲ್ಕದಲ್ಲಿ ಮಿದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರ ಶಸಚಿಕಿತ್ಸೆ ಮಾಡಲಾಗುತ್ತಿದೆ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕನ್ಹೇರಿಮಠದ ಸಿದ್ಧಗಿರಿ ಆಸ್ಪತ್ರೆ'ಯು ಈ ಅತ್ಯಾಧುನಿಕ ಯಂತ್ರ ಬಳಸುತ್ತಿರುವ ದೇಶದ ಮೊದಲ ಆಸ್ಪತ್ರೆಯಾಗಿದೆ. ಗ್ರಾಮೀಣ ಭಾಗದ ಬಡ ಜನರಿಗೆ ಅನುಕೂಲವಾಗಲೆಂದು 4 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದ ಈ ಯಂತ್ರವು ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಬೇಗ ಪತ್ತೆ ಮಾಡುತ್ತದೆ. ಇದರ ಮೂಲಕ ಪರಿಣಾಮಕಾರಿಯಾಗಿ ಶಸಚಿಕಿತ್ಸೆ ಮಾಡಿ, ರೋಗಿಗಳನ್ನು ಬೇಗ ಗುಣಮುಖ ಮಾಡಬಹುದು ಎಂದರು.

ದೊಡ್ಡ ಮಹಾನಗರಗಳ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಮಿದುಳಿನ ಶಸಚಿಕಿತ್ಸೆ ಮಾಡಿಸಿಕೊಂಡರೆ 10 ಲ ರೂಪಾಯಿಗೂ ಅಧಿಕ ವೆಚ್ಚವಾಗುತ್ತದೆ. ಆದರೆ, ನಮ್ಮಲ್ಲಿ ಈ ಯಂತ್ರದ ಸಹಾಯದಿಂದ 1 ಲ ರೂ. ವೆಚ್ಚದಲ್ಲೆ ಶಸಚಿಕಿತ್ಸೆ ಮಾಡಲಾಗುತ್ತಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಕರ್ನಾಟಕ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳಡಿ ಸಹ ನಮ್ಮಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ಆಸ್ಪತ್ರೆ ವೈದ್ಯಕಿಯ ನಿರ್ದೇಶಕ ಮತ್ತು ನರರೋಗ ಶಸಚಿಕಿತ್ಸಕ ಡಾ.ಶಿವಶಂಕರ ಮರಜಕ್ಕೆ ಮಾತನಾಡಿ, ಈ ಮೈಕ್ರೋಸ್ಕೋಪ್​ ಮಿದುಳಿನ ಸೂಕ್ಷ$್ಮ ನರಗಳ ಸಂಬಂಧಪಟ್ಟ ಕಾಯಿಲೆಗಳನ್ನು ಅತೀ ನಿಖರವಾಗಿ ಕಡಿಮೆ ಸಮಯದಲ್ಲಿ ಹಾಗೂ ಹೆಚ್ಚು ರಕ್ತ ಸ್ರಾವವಾಗದಂತೆ ಮಾಡಿ, ರೋಗಿಗಳನ್ನು ಬೇಗ ಗುಣಮುಖರನ್ನಾಗಿ ಮಾಡಲಾಗುತ್ತಿದೆ. ದೇಶದ 10&15 ನರರೋಗಕ್ಕೆ ಸಂಬಂಧಿಸಿದ ಆಸ್ಪತ್ರೆಗಳಲ್ಲಿ ಆಗುವಂತ ಮಿದುಳಿನ ಬೈಪಾಸ್​ ಶಸ ಚಿಕಿತ್ಸೆ ಅಪಸ್ಮಾರಕ್ಕೆ ಹಾಗೂ ಮುಂತಾದ ಜಟಿಲ ಶಸಚಿಕಿತ್ಸೆಗಳಿಗೆ ನಮ್ಮಲ್ಲಿ ನುರಿತ ತಜ್ಞರ ತಂಡವಿದೆ ಎಂದರು. ಮೊದಲ ನ್ಯೂರೋ ನ್ಯಾವಿಗೇಶನ್​ ನ್ಯೂರೋ ಮಾನಿಟರಿಂಗ್​, ಕೀ ಹೋಲ್​, ಮಿದುಳಿನ ಹಾಗೂ ಬೆನ್ನುಹುರಿ (ಸ್ಪೆನ್​) ಶಸ ಚಿಕಿತ್ಸೆ ಮಾಡುವಂತ ಯಂತ್ರೋಪಕರಣಗಳನ್ನು ಹೊಂದಿರುವ ಹಳ್ಳಿಯಲ್ಲಿರುವ ಮೊದಲ ಆಸ್ಪತ್ರೆಯಾಗಿದೆ ಎಂದರು.

ಅರಿವಳಿಕೆ ತ ಡಾ.ಪ್ರಕಾಶ ಭರಮಗೌಡರ ಸುದ್ದಿಗೋಷ್ಠಿಯಲ್ಲಿದ್ದರು.

ಫೋಟೋ: 27 ಜಗ್ಗು 2

ಸುದ್ದಿಗೋಷ್ಠಿಯಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಡಾ. ಪ್ರಕಾಶ ಭರಮಗೌಡರ, ಡಾ.ಶಿವಶಂಕರ ಮರಜಕ್ಕೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net