

ಯಡ್ರಾಮಿ: ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನನೊಂದ ಪ್ರೇಮಿಗಳು ಜಮೀನಿನಲ್ಲಿಯೇ ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಡ್ರಾಮಿ ತಾಲೂಕಿನಮಾಗಣಗೇರಾ ಗ್ರಾಮದಲ್ಲಿ ನಡೆದಿದೆ.
ಯಡ್ರಾಮಿ ತಾಲೂಕಿನ ಮಾಗಣಗೇರಾ ಗ್ರಾಮದ ಶಶಿಕಲಾ ತಂದೆ ಸಿದ್ದಪ್ಪ(18) ಹಾಗೂ ಇದೇ ಗ್ರಾಮದ ಗೊಲ್ಲಾಳ ತಂದೆ ಮರಿಲಿಂಗಪ್ಪ (24) ನೇಣಿಗೆ ಶರಣಾದ ಪ್ರೇಮಿಗಳು.
ಮನೆಯವರ ವಿರೋಧದ ನಡುವೆ ಶುಕ್ರವಾರ ರಾತ್ರಿ ಪ್ರೇಮಿಗಳು ಮದುವೆ ಮಾಡಿಕೊಂಡು, ನಂತರ ಕೆಲವೇ ಗಂಟೆಗಳಲ್ಲಿ ಊರಿನ ಹೊರವಲಯದ ಗೊಲ್ಲಾಳ ತಂದೆ ಮರಿಲಿಂಗಪ್ಪ ಅವರ ಜಮೀನಿನಲ್ಲಿರುವ ಮರಕ್ಕೆ ಇಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.