ಎರಡು ಮಕ್ಕಳಿದ್ದ ವಿಚ್ಛೇದಿತೆಯನ್ನು ಪ್ರೀತಿಸುತ್ತಿದ್ದವನೇ ಕುತ್ತಿಗೆ ಬಿಗಿದು ಕೊಂದ!

Murder
Published on

ಬೆಂಗಳೂರು: ಆಕೆಗೆ ಮದುವೆಯಾಗಿತ್ತು, ಎರಡು ಮಕ್ಕಳಿದ್ದವು, ಬಳಿಕ ವಿಚ್ಛೇದನವೂ ಆಗಿತ್ತು. ಅದಾಗ್ಯೂ ಮತ್ತೊಬ್ಬನ ಪ್ರೀತಿಸುತ್ತಿದ್ದಳು. ದುರಂತವೆಂದರೆ ಆತನೇ ಆಕೆಯೊಂದಿಗೆ ಜಗಳ ತೆಗೆದು ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

ಬೆಂಗಳೂರಿನ ಪಟ್ಟೆಗಾರಪಾಳ್ಯದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಗಾಯತ್ರಿ (26) ಕೊಲೆಗೀಡಾದ ಮಹಿಳೆ. ಮಂಜುನಾಥ ಪ್ರಸಾದ್ ಆಕೆಯನ್ನು ಕೊಲೆ ಮಾಡಿದ ಆರೋಪಿ. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆಗಿದೆ ಎನ್ನಲಾಗಿದ್ದು, ಕೊಲೆಯಲ್ಲಿ ಕೊನೆಗೊಂಡಿದೆ.

ಮನೆ ಕೆಲಸ ಮಾಡಿಕೊಂಡಿದ್ದ ಗಾಯತ್ರಿಗೆ ಮೊದಲೇ ಮದುವೆಯಾಗಿ ಎರಡು ಮಕ್ಕಳಿದ್ದವು. ನಂತರ ವಿಚ್ಛೇದನ ಪಡೆದು ಪ್ರತ್ಯೇಕವಾಗಿದ್ದ ಈಕೆ ಮಂಜುನಾಥ ಪ್ರಸಾದ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು. ಆರೋಪಿಯನ್ನು ವಿಜಯನಗರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net