ಪ್ರೀತಿ, ವಿಶ್ವಾಸದಿಂದ ಬದುಕು ಸಮೃದ್ಧ

29ATHANIGRAMIN1
Published on

ಅಥಣಿ ಗ್ರಾಮೀಣ: ಮನುಷ್ಯ ದ್ವೇಷ-ಅಸೂಹೆ ಬಿಟ್ಟು ಪರಸ್ಪರ ಪ್ರೀತಿ-ವಿಶ್ವಾಸದ ತಳಹದಿಯ ಮೇಲೆ ಸಹಬಾಳ್ವೆ ನಡೆಸಬೇಕು. ಅಂದಾಗ ಬದುಕು ಸಮೃದ್ಧವಾಗುತ್ತದೆ ಎಂದು ಭರತನೂರ ಗುರುನಂಜೇಶ್ವರಮಠದ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಶ್ರೀವೀರಭದ್ರೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ತುಲಾಭಾರ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಆಸ್ತಿ, ಅಂತಸ್ತು ಹಾಗೂ ಐಶ್ವರ್ಯ ಯಾವುದು ಶಾಸ್ವತವಲ್ಲ. ಸಮಾಜದಲ್ಲಿನ ಅಸಹಾಯಕರು ಹಾಗೂ ವೃದ್ಧರಿಗೆ ದಾನ, ಧರ್ಮ ಮಾಡುವ ಮೂಲಕ ಪರೋಪಕಾರ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಬೆಳಗ್ಗೆ ವೀರಭದ್ರೇಶ್ವರ ಗದ್ದುಗೆಗೆ ಅಭಿಷೇಕ ಸಲ್ಲಿಸಿ ಅರ್ಚಕರು ಅಗ್ನಿ ಪ್ರವೇಶಿಸಿದರು. ಭರತನೂರ ಗುರುನಂಜೇಶ್ವರಮಠದ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಅವರಿಗೆ ಭಕ್ತರು ಪಾದಪೂಜೆ ಹಾಗೂ ತುಲಾಭಾರ ಸೇವೆ ಸಲ್ಲಿಸಿದರು. ಪ್ರಭುಕುಮಾರ ಮದರಿ ಕಲಾ ತಂಡದವರು ಸಂಗೀತ ಸೇವೆ ನೀಡಿದರು.

ಗಣ್ಯರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಷಡಕ್ಷರಿ ಶರಣರು, ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಗುರುಮೂರ್ತಯ್ಯ ಕಾಡದೇವರಮಠ, ಲಕ್ಷ್ಮಣ ಹೇರೂರ, ಅಮೀತ ದೇಸಾಯಿ, ಸುಭಾಸ ಸೋನಕರ, ಗುರುಪಾದಯ್ಯ ಹಿರೇಮಠ, ಗುರುನಾಥ ಶರಣ, ಈರಯ್ಯ ಮಠಪತಿ, ಶಿವಗೌಡ ನೇಮಗೌಡ, ಕಲ್ಲಯ್ಯ ಮಠಪತಿ, ಕಸ್ತೂರಿ ಮಾಳಿ, ಮಲ್ಲಿಕಾರ್ಜುನ ಪರಾಂಡೆ, ಅಪ್ಪಾಸಾಹೇಬ ಕವಟಗಿ, ನಬಿಸಾಬ ಮುಜಾವರ, ನಾನಾಸಾಹೇಬ ವೀರಗೌಡ, ಸೊಮೇಶ ಜ್ಯೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net