ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಚಲಿಸುತ್ತಿದ್ದ ಆಟೋದಿಂದ ತಳ್ಳಿ ಕೊಲೆ ಮಾಡಿದ ಯುವಕ

chikkamagaluru feb 05 2020
Published on

ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ ಯುವತಿಯನ್ನು ಆಟೋದಿಂದ ತಳ್ಳಿ ಯುವಕನೊಬ್ಬ ಕೊಲೆ ಮಾಡಿದ್ದಾನೆ.
ಮೂಡಿಗೆರೆ ತಾಲೂಕಿನ ಬಾನಳ್ಳಿ ಗ್ರಾಮದ ರಶ್ಮಿ (19) ಎಂಬುವವರನ್ನು ಚೇತನ್​ ಆಟೋದಿಂದ ತಳ್ಳಿ ಕೊಲೆ ಮಾಡಿದ್ದಾನೆ.

ಚೇತನ್​ ಆಟೋದಲ್ಲಿ ಯುವತಿಯನ್ನು ಕರೆದುಕೊಂಡು ಹೋಗುವಾಗ ತನ್ನ ಪ್ರೇಮ ನಿವೇದನೆ ಮಾಡಿಕೊಂಡ. ಯುವತಿ ಇದನ್ನು ನಿರಾಕರಿಸಿದಳು. ಇದರಿಂದ ಕೋಪಗೊಂಡ ಆತ ಚಲಿಸುತ್ತಿದ್ದ ಆಟೋದಿಂದ ತಳ್ಳಿದ. ಬಿದ್ದ ರಭಸಕ್ಕೆ ಯುವತಿಯ ಮೂಗು ಹಾಗೂ ಬಾಯಲ್ಲಿ ರಕ್ತಸ್ರಾವವಾಗತೊಡಗಿತು. ಕೂಡಲೇ ಆತ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ. ವೈದ್ಯರಿಗೆ ಆತ ಆಟೋದಿಂದ ಬಿದ್ದು ಗಾಯಗೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದ. ಅನುಮಾನ ಬಂದು ಪ್ರಶ್ನಿಸಿದಾಗ ಆಟೋದಿಂದ ತಳ್ಳಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಕೂಡಲೇ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net