

ಮಧುಗಿರಿ: ಪಾಲಕರ ವಿರೋಧದ ನಡುವೆ ಪ್ರೇಮಿಗಳಿಬ್ಬರು ಅಂಬೇಡ್ಕರ್ ಮತ್ತು ವಾಲ್ಮೀಕಿ ಭಾವಚಿತ್ರದ ಎದುರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಎಸ್ಸಿ ಯುವತಿ ಚಂದನಾ (18), ಅದೇ ಗ್ರಾಮದ ಎಸ್ಟಿ ಯುವಕ ಶ್ರೀಧರ್ (25) 6 ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಪಾಲಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳು ರಕ್ಷಣೆ ನೀಡುವಂತೆ ವಿಡಿಯೋ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದರು.
ಜು.20ರಂದು ಸಂವಿಧಾನದ ಪೀಠಿಕೆಯನ್ನೇ ಮಾಂಗಲ್ಯ ಧಾರಣೆ ಮಂತ್ರವಾಗಿ ಓದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಳಿಕ ಇವರಿಬ್ಬರ ಪ್ರೇಮ ವಿವಾಹ ಮಧುಗಿರಿ ಠಾಣೆ ಮೆಟ್ಟಿಲೇರಿದ್ದು, ಪಿಎಸೈ ಕಾಂತರಾಜು ಪಾಲಕರಿಗೆ ಬುದ್ದಿ ಹೇಳಿ ರಾಜಿ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.