ಅನ್ಯ ಧರ್ಮದ ಯುವಕನ ಜತೆ ನಾಪತ್ತೆಯಾಗಿದ್ದ ಹಿಂದು ಯುವತಿ ಪತ್ತೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಆರೋಪಿ

Girl
Published on

ಉಡುಪಿ: ಅನ್ಯ ಧರ್ಮದ ಯುವಕನ ಜತೆ ಹಿಂದು ಯುವತಿ ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಜೋಡಿಯನ್ನು ಮಲ್ಪೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪರಾರಿಯಾಗಿದ್ದ ಜೋಡಿ ಹಾಸನದಲ್ಲಿ ಪತ್ತೆಯಾಗಿದ್ದಾರೆ. ಯುವತಿ ನನ್ನ ಜತೆ ಇಲ್ಲ ಎಂದು ಪೊಲೀಸರಿಗೆ ಸುಳ್ಳು ಹೇಳಿ ಯಾಮಾರಿಸಿದ್ದ ಆರೋಪಿ ಅಝರ್​ ಇದೀಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

ಕಾಲೇಜಿಗೆ ಹೋಗುತ್ತಿದ್ದ ಹುಡುಗಿಯನ್ನು ಪುಸಲಾಯಿಸಿದ್ದ ಅಝರ್​ ವಾರದ ಹಿಂದೆ ಉಡುಪಿಯಲ್ಲಿ ವಿವಾಹ ನೋಂದಣಿಗೂ ಮುಂದಾಗಿದ್ದ. ಯುವತಿಯ ಹೆತ್ತವರಿಗೆ ತಿಳಿಯದಂತೆ ಮದುವೆಗೆ ಮುಂದಾಗಿದ್ದ. ಯುವತಿ ಮನೆಯವರ ತೀವ್ರ ವಿರೋಧದ ಕಾರಣ ಮುರಿದು ಬಿದ್ದಿತ್ತು. ನಾನು ಆತನನ್ನು ಮದುವೆಯಾಗುವುದಿಲ್ಲ ಎಂದು ಪೋಲೀಸರ ಎದುರು ಯುವತಿ ಹೇಳಿಕೆ ನೀಡಿದ್ದಳು. ಇದನ್ನೂ ಓದಿ: ಸೇಫ್ ರೂಮ್​​ ರಹಸ್ಯ!: 100ಕ್ಕೂ ಹೆಚ್ಚು ಚಿನ್ನದ ಪ್ಯಾಕೆಟ್​ಗಳು ಎಸ್​ಬಿಐ ಶಾಖೆಯಿಂದ ನಿಗೂಢವಾಗಿ ನಾಪತ್ತೆ!

ಇದರ ನಡುವೆ ಎರಡ ದಿನಗಳ ಹಿಂದೆ ಅಝರ್​ ಮತ್ತು ಯುವತಿ ಏಕಾಏಕಿಯಾಗಿ ನಾಪತ್ತೆಯಾಗಿದ್ದರು. ಈ ಸಂಬಂಧ ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಪ್ರಕರಣದ ಬೆನ್ನತ್ತ ಪೊಲೀಸರು ಹಾಸನದಲ್ಲಿ ಇಬ್ಬರನ್ನು ಪತ್ತೆಹಚ್ಚಿದ್ದಾರೆ. ಇಂದು ಮಧ್ಯಾಹ್ನ ಮಲ್ಪೆ ಠಾಣೆಗೆ ಕರೆತರುವ ಸಾಧ್ಯತೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net